ಈ ಬ್ಲಾಗ್ ಅನ್ನು ಹುಡುಕಿ

Top 10 Ram Mandir in India Kannada

ನಮ್ಮ ಭಾರತ ದೇಶದಲ್ಲಿ ಪ್ರಸಿದ್ಧವಾಗಿರುವ ಶ್ರೀರಾಮ 10 ದೇವಾಲಯಗಳ ಬಗ್ಗೆ ತಿಳಿಯೋಣ.

ಆತ್ಮೀಯರೇ ಹೊಸವರುಷ ಯುಗಾದಿ ಹಬ್ಬದ ನಂತರ ಬರುವಂತಹ ಚೈತ್ರ ಶುಕ್ಲ ನವಮಿ ಎಂದು ಆಚರಿಸುವ ಒಂದು ವಿಶೇಷ ಹಬ್ಬವೇ ಶ್ರೀರಾಮನವಮಿ ಹಬ್ಬ,

ಪಿತೃವಾಕ್ಯ ಪರಿಪಾಲಕ ವೀರ ಶೂರ ಸದ್ಗುರು ಸಂಪನ್ನ ಮರ್ಯಾದ ಪುರುಷೋತ್ತಮ ಮಹಾವಿಷ್ಣುವಿನ ಏಳನೇ ಅವತಾರ,ಶ್ರೀರಾಮಚಂದ್ರರು ಜನಿಸಿರುವಂತಹ ದಿನವೇ ಶ್ರೀ ರಾಮನವಮಿ ಹಬ್ಬ ಎಂದು ನಾವು ಆಚರಣೆ ಮಾಡುತ್ತೇವೆ. 

ತೇತ್ರಾಯುಗದಲ್ಲಿ ದಶರಥ ಮಹಾರಾಜರು ಮಾಡಿದ ಪುತ್ರಕಾಮೇಷ್ಠಿಯಾಗ ದಲ್ಲಿ ನಾಲ್ಕು ಜನ ಪುತ್ರರಲ್ಲಿ ಜೇಷ್ಠ ಪುತ್ರರಾಗಿ ಚೈತ್ರಮಾಸದ ಶುಕ್ಲಪಕ್ಷದ ನವಮಿಯ ದಿನ ಪ್ರಭು ಶ್ರೀರಾಮಚಂದ್ರನ ಜನಿಸುತ್ತಾರೆ.ಪ್ರಭು ಶ್ರೀರಾಮಚಂದ್ರರು ನಮ್ಮ ಭಾರತ ದೇಶದ ಈ ದಿವಂಗತ  ಹಿಂದೂಗಳಲ್ಲಿ ಆದರ್ಶ ರಾಜರಾಗಿ ಸಿಂಹರೋಡರಾಗಿರುವವರು. 

1)ಅಯೋಧ್ಯೆ:ಉತ್ತರಪ್ರದೇಶ

Ayodhya Ram Mandir
Ayodhya Ram Mandir 

ಬಂಧುಗಳೇ  ಅಯೋಧ್ಯೆ ಉತ್ತರಪ್ರದೇಶ ರಾಜ್ಯದ ಸರಯೂ ನದಿ ದಡದಲ್ಲಿ ಇರುವಂತಹ ಪಟ್ಟಣ ಇದು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಸ್ಥಳ, ಏಕೆಂದರೆ ತ್ರೇತಾಯುಗದಲ್ಲಿ ಯುಗದಲ್ಲಿ ಪ್ರಭು ಶ್ರೀರಾಮಚಂದ್ರನು ಜನಿಸಿರುವ ಭೂಮಿಯಾಗಿದೆ. 

ಲಕ್ಷಾಂತರ  ಸಾವಿರಾರು ಭಕ್ತಾದಿಗಳು ಶ್ರೀರಾಮುನು  ಜನಿಸಿರುವ ಈ ದೈವಿಕ ಭೂಮಿಗೆ ಭೇಟಿ ನೀಡಲು ಬರುತ್ತಿರುತ್ತಾರೆ. ಹಿಂದೆ ಪ್ರಭು ಶ್ರೀರಾಮಚಂದ್ರರು  ಜನಿಸಿರುವಂತಹ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ದೇವಾಲಯವಿತ್ತು. ಇದನ್ನು ಬಾಬರನ ಆದೇಶದಂತೆ ನೆಲಸಮ ಮಾಡಲಾಗಿದೆ ಮತ್ತೆ ಅದೇ ಸ್ಥಳದಲ್ಲಿ ಒಂದು ಮಸೀದಿಯನ್ನು ನಿರ್ಮಿಸಲಾಗಿತ್ತು.  

ಪ್ರಸ್ತುತ ಈ ಕಾಲಘಟ್ಟದಲ್ಲಿ ಕೋಟ್ಯಾಂತರ ಹಿಂದೂಗಳ ಕನಸು ಆಗಿರುವ ಶ್ರೀರಾಮ ಮಂದಿರವನ್ನು ನಿರ್ಮಾಣ ಕಾರ್ಯವೂ ತುಂಬಾ ಜೋರಾಗಿ ಸಾಗುತ್ತಿದೆ.ಈ ದೇವಾಲಯದಲ್ಲಿ ಸ್ಥಾಪನೆಗೆ ಬೇಕಾದ ಪ್ರಭು ಶ್ರೀರಾಮಚಂದ್ರರ ವಿಗ್ರಹವನ್ನು ವಿಶೇಷ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲು ತಯಾರಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ಸುಂದರವಾದ ಬೃಹತ್ ಮೂರ್ತಿಯ ರಾಮಮಂದಿರ ನಿರ್ಮಾಣವಾಗುತ್ತದೆ. ಪ್ರಸ್ತುತ ಅಯೋಧ್ಯೆಯಲ್ಲಿ ನೋಡಲು ಹಲವು ಪ್ರಭು ಶ್ರೀರಾಮ ದೇಗುಲಗಳಿವೆ ಅದರಲ್ಲಿ ಪ್ರಮುಖವಾದವು ಪ್ರಾಚೀನ ದೇವಾಲಯ 

@ ಕನಕ ಭವನ  ಕನಕ ಎಂದರೆ ಚಿನ್ನ ಎಂದರ್ಥ ಈ ವಿಗ್ರಹವು ಪ್ರಭು  ರಾಮಚಂದ್ರರು ಚಿನ್ನದ ಕಿರೀಟವನ್ನು ಧರಿಸಿರುವ ರಾಮ-ಸೀತೆಯರ ವಿಗ್ರಹವನ್ನು ಹೊಂದಿದೆ.  ಶ್ರೀರಾಮಚಂದ್ರರನ್ನು ವನವಾಸಕ್ಕೆ ಕಳಿಸಲು ಕಾರಣವಾದಂತಹ ಅವರ ಮಲತಾಯಿಯ ಕೈಕೆ ಯು ಪಶ್ಚಾತಾಪದ ಸಂಕೇತವಾಗಿ ಪ್ರಭು ಶ್ರೀರಾಮಚಂದ್ರರಿಗೆ ನಿರ್ಮಿಸಿರುವಂತೆ ದೇವಾಲಯವಾಗಿದೆ.  ಇದನ್ನು ಸ್ಥಳೀಯ ಪುರಾಣಗಳು ತಿಳಿಸುತ್ತವೆ.ಕಾಲಾನಂತರದಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. 

2) ಕಾಲಾರಾಮ ದೇವಾಲಯ:ಮಹಾರಾಷ್ಟ್ರ 

ಕಾಲ ರಾಮ ದೇವಾಲಯ ನಾಸಿಕ ಜಿಲ್ಲೆಯ ಪಂಚವಟಿಯಲ್ಲಿದೆ. ಕಾಲ ರಾಮ ಎಂದರೆ ಕಪ್ಪು ರಾಮ ಎಂದರ್ಥ ಈ ದೇವಾಲಯದಲ್ಲಿ ಪ್ರಭು ಶ್ರೀರಾಮಚಂದ್ರರ ಎರಡು ಅಡಿಯ ಕಪ್ಪುಶಿಲೆಯ ವಿಗ್ರಹವಿದೆ.  ಪ್ರಭು ಶ್ರೀರಾಮಚಂದ್ರನ ಕಪ್ಪುಶಿಲೆಯ ವಿಗ್ರಹದ ಕಾರಣಕ್ಕೆ ಈ ದೇವಾಲಯಕ್ಕೆ ಕಾಲಾರಾಮ ದೇವಾಲಯ ಎಂದು ಹೆಸರು ಬಂದಿದೆ.  

ಈ ದೇವಾಲಯವನ್ನು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದಲೇ ನಿರ್ಮಿಸಲಾಗಿದೆ.ಸ್ಥಳ ಪುರಾಣದ ಪ್ರಕಾರ ಪ್ರಭು ಶ್ರೀರಾಮಚಂದ್ರರು ಹದಿನಾಲ್ಕು ವರ್ಷ ವನವಾಸ ಸಂದರ್ಭದಲ್ಲಿ ಹತ್ತು ವರ್ಷಗಳ ನಂತರ ಸುಮಾರು ಎರಡು ವರ್ಷಗಳ ಕಾಲ ಗೋದಾವರಿ ನದಿ ದಡದಲ್ಲಿ ಪಂಚವಟಿಯಲ್ಲಿ ನೆಲೆಸಿದ್ದರು ಎಂದು ನಂಬಲಾಗಿದೆ.  ರಘು ಶ್ರೀರಾಮಚಂದ್ರ ಈ ಸ್ಥಳದಲ್ಲಿ ನೆಲೆಸಿರುವದರಿಂದಲೇ ಪಂಚವಟಿಯಲ್ಲಿ ಕಾಲಾರಾಮ ದೇವಾಲಯವನ್ನು ನಿರ್ಮಿಸಲಾಗಿದೆ.  

ಈ ದೇವಾಲಯವು 1784ರಲ್ಲಿ ಸರದಾರ್ ರಂಗರಾವ್ ವಡೆಕಲ್   ಎಂಬುವವರು ನಿರ್ಮಿಸಿದ್ದಾರೆ ಅಂತೆ ಸರದಾರ ರಂಗರಾವ್ ವಡೆಕಲವರಿಗೆ ಗೋದಾವರಿ ನದಿ ದಡದಲ್ಲಿ ಪ್ರಭು ಶ್ರೀರಾಮಚಂದ್ರನ ಕಪ್ಪು ಶಿಲೆಯ ವಿಗ್ರಹವು ಬಿದ್ದಿರುವಂತೆ ಕನಸೊಂದು ಬೀಳುತ್ತದೆ. 

ಅವರು ಮರುದಿನವೇ ಗೋದಾವರಿ ನದಿಯಲ್ಲಿ ಹುಡುಕಿದಾಗ ನದಿಯಲ್ಲಿ ಕಪ್ಪು ಕಲ್ಲಿನ ವಿಗ್ರಹ ಅವರಿಗೆ ಅಲ್ಲಿ ದೊರೆಯುತ್ತದೆ. ಆ ಶಿಲೆಯನ್ನು ರಂಗರಾವ್ ಅವರು ತೆಗೆದುಕೊಂಡು ಬಂದು ಸುಂದರವಾದ ಆಲಯವನ್ನು ನಿರ್ಮಿಸುತ್ತಾರೆ. ಈ ದೇವಾಲಯವನ್ನು ಸಿದ್ಧಪಡಿಸಲು 12 ವರ್ಷಗಳ ಕಾಲ ತೆಗೆದುಕೊಂಡಿತು. 

3) ಭದ್ರಾಚಲಂನ ದೇವಾಲಯ: ತೆಲಂಗಾಣ

ಗೋದಾವರಿ ನದಿಯ ದಡದಲ್ಲಿರುವ ಭದ್ರಾಚಲಂ, ಈ ದೇವಾಲಯವನ್ನು ದಕ್ಷಿಣದ ಅಯೋಧ್ಯೆ ಎಂದು ಕರೆಯಲಾಗುತ್ತದೆ.ಅಯೋಧ್ಯ ನಂತರ ಪ್ರಭು ಶ್ರೀರಾಮಚಂದ್ರನ ಅತ್ಯಂತ ದೊಡ್ಡ ಶಕ್ತಿ ಎಂದರೆ ಅದು ಭದ್ರಾಚಲಂ. 

ಸ್ಥಳ ಪುರಾಣದ ಪ್ರಕಾರ ತಂದೆಯ ಮಾತಿನಂತೆ ಕಾಡಿಗೆ ಬಂದಿರುವ ರಾಮಚಂದ್ರರು ಭದ್ರಾಚಲಂನ ಸುತ್ತಮುತ್ತಲಿರುವ ದಂಡಕಾರಣ್ಯದಲ್ಲಿ ಪ್ರಭು ಶ್ರೀರಾಮಚಂದ್ರನ ಹೆಚ್ಚುಕಾಲನೆಲೆಸಿದ್ದರಂತೆ.ಭದ್ರಾಚಲಂನ ಸಮೀಪದಲ್ಲಿರುವ ಧರ್ಮಶಾಲೆಯಲ್ಲಿ ಪರಮೇಶ್ವರನು ಪಾರ್ಣ ಶಾಲೆಯಲ್ಲಿ ಗುಡಿಸಿಲವನ್ನು ಕಟ್ಟಿಕೊಂಡು ವಾಸವಿದ್ದರಂತೆ. 

ಪ್ರಭು ಶ್ರೀರಾಮಚಂದ್ರನು ಇಲ್ಲೇ ವಾಸವಿರುವಾಗಲೇ ಮಾರೀಚನು ಸುಂದರ ಜಿಂಕೆಯ ರೂಪದಲ್ಲಿ ಸೀತಾಮಾತೆಯ ಮನಸ್ಸನ್ನು ಸೆಳೆದದ್ದು, ರಾವಣನು ಸೀತಾ ಮಾತೆಯನ್ನು ಅಪಹರಣ ಮಾಡಿರುವುದು ಸಹ ಇದೇ ಸ್ಥಳದಲ್ಲಿ.ಇದೇ ಸಂದರ್ಭದಲ್ಲಿ ಮೇರು ಪುತ್ರನಾದ ಭದ್ರಚಲಂ ಶಿಲೆಯಾಗಿ ತನ್ನ ಶಿರದ ಮೇಲೆ ಕುಳಿತುಕೊಳ್ಳಬೇಕೆಂದು ಪ್ರಭು ಶ್ರೀರಾಮಚಂದ್ರರಲ್ಲಿ 

ಅತ್ಯಂತ ಭಕ್ತಿಭಾವದಿಂದ ಕೇಳಿಕೊಳ್ಳುತ್ತಾನೆ. ಸೀತಾ ಅನ್ವೇಷಣೆಯನ್ನು ಮುಗಿಸಿಕೊಂಡು ಬಂದ ನಂತರ ನಿನ್ನ ಆಸೆಯನ್ನು ಈಡೇರಿಸುತ್ತೇನೆ ಎಂದು ಭದ್ರನಿಗೆ  ಪ್ರಭು ಶ್ರೀರಾಮಚಂದ್ರರು ಮಾತನ್ನು ಕೊಡುತ್ತಾರೆ.ತನ್ನ ಅವತಾರವನ್ನು ಮುಗಿಸಿದ ನಂತರವೂ ಸಹ ಭಕ್ತನಾಗಿ ಕೊಟ್ಟಂತಹ ಮಾತನ್ನು ಈಡೇರಿಸಲು ಆಗುವುದಿಲ್ಲ,ಆದರೆ ಅವತಾರದ ನಂತರ ದೇವರು ಸೀತಾಮಾತೆ ತಮ್ಮ ಲಕ್ಷ್ಮಣನೊಂದಿಗೆ ಭದ್ರನೀಗೆ ದರ್ಶನವನ್ನು ಕೊಡುತ್ತಾರೆ. 

ಭದ್ರನ ಆಸೆಯನ್ನು ಈಡೇರಿಸುತ್ತಾರೆ. ಪರಮಭಕ್ತ ಭದ್ರ ನಿಂದಾಗಿ ಈ ಕ್ಷೇತ್ರಕ್ಕೆ ಭದ್ರಾಚಲಂ ಎಂದು ಹೆಸರು ಬಂದಿದೆ. ಭದ್ರಾಚಲಂನಲ್ಲಿ ಚಿಕ್ಕ ಪರ್ವತದ ಮೇಲೆ 17 ನೇ ಶತಮಾನದ ಶ್ರೀರಾಮಚಂದ್ರನ ದೇಗುಲವಿದೆ.ಈ ದೇವಾಲಯವನ್ನು ಶ್ರೀರಾಮಚಂದ್ರರ ಕಟ್ಟಾ ಭಕ್ತರಾದಂತಹ ಭದ್ರಾಚಲಂನ ರಾಮದಾಸರು ನಿರ್ಮಿಸಿದ್ದಾರೆ.ಭದ್ರಾಚಲಂನಲ್ಲಿ ಇರುವಂತಹ ರಾಮ ಲಕ್ಷ್ಮಣ ಸೀತೆಯರ ವಿಗ್ರಹವನ್ನು ಸ್ವಯಂಭು ವಿಗ್ರಹವೇ ಎಂದು ಪರಿಗಣಿಸಲಾಗಿದೆ. ಏಕೆಂದರೆ ಪೋಕಲ ದಮ್ಮಪಾ ಎಂಬ ಮಹಿಳೆಯ ಕನಸಿನಲ್ಲಿ ಕಾಣಿಸಿಕೊಂಡ ರಾಮಚಂದ್ರನು ಪೋಕಲ ದಮ್ಮಪಾನಿಗೆ 

ಭದ್ರಗಿರಿ ಬೆಟ್ಟದಮೇಲೆ ತಮ್ಮ ವಿಗ್ರಹವನ್ನು ಇರುವುದಾಗಿ ತಿಳಿಸಿಕೊಡುತ್ತಾರೆ.ಆ ಮಹಿಳೆ ಭದ್ರಗಿರಿ ಬೆಟ್ಟವನ್ನು ಹುಡುಕಿ ಸಿದಾಗ ಆಶ್ಚರ್ಯವೆಂಬಂತೆ  ರಾಮ ಲಕ್ಷ್ಮಣ ಸೀತಾ ದೇವಿಯರ ವಿಗ್ರಹ ದೊರೆಯುತ್ತದೆ. ಆ ವಿಗ್ರಹಕ್ಕೆ ಪೋಕಲ ದಮ್ಮಪಾ ಸಣ್ಣ ದೇಗುಲವನ್ನು ನಿರ್ಮಿಸಿ ಪೂಜಿಸುತ್ತಾರೆ. ಅದನ್ನು ಮುಂದೆ ಭದ್ರಾಚಲಂನ ರಾಮದಾಸರು 17ನೇ ಶತಮಾನದಲ್ಲಿ ದೊಡ್ಡದಾಗಿ ನಿರ್ಮಿಸುತ್ತಾರೆ. 

4)ಮಾಲ್ಯವಂತ ರಘುನಾಥ ದೇವಸ್ಥಾನ: ಕರ್ನಾಟಕ

ನಮ್ಮ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ಮಾಲ್ಯವಂತ ರಘುನಾಥ ಶ್ರೀರಾಮಚಂದ್ರ ಯೋಗ ವಿರಾಮರಾಗಿ ದರ್ಶನವನ್ನು ನೀಡುತ್ತಾರೆ.ಇಲ್ಲಿ ಶಸ್ತ್ರಗಳು ಇಲ್ಲದ ಪ್ರಭು ಶ್ರೀರಾಮಚಂದ್ರನ ದರ್ಶನವನ್ನು ನಾವು ಪಡೆಯಬಹುದು.ಈ ತರಹದ ರಾಮರವಿಗ್ರಹ ದೇಶದಲ್ಲಿ ಎಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ. 

ಸೀತಾಮಾತೆ ಅನ್ವೇಷಣೆಯಲ್ಲಿ ಶ್ರೀರಾಮಚಂದ್ರರು ಮಳೆಗಾಲದ ನಾಲ್ಕು ತಿಂಗಳುಗಳನ್ನು ಇಲ್ಲಿಯೇ ಕಳೆದರೆಂದು ಚಾತುರ್ಮಾಸದ ಸ್ಥಳಪುರಾಣವಿದೆ.ಹಾಗಾಗಿಯೇ ಉತ್ತರಭಾರತದ ಭಕ್ತಾದಿಗಳು ನಾಗ ಸ್ವಾಮಿಗಳು ಹಂಪಿಯಲ್ಲಿ ವರ್ಷಪೂರ್ತಿ ಬಂದು ಭೇಟಿ ನೀಡುತ್ತಿರುತ್ತಾರೆ. ಹಂಪಿಯ ಮಾಲ್ಯವಂತ ರಘುನಾಥ ದೇವಸ್ಥಾನದ ವಿಶೇಷವೇನೆಂದರೆ ಕಳೆದ ಹತ್ತು ವರ್ಷಗಳಿಂದ ಅಖಂಡ ರಾಮಾಯಣ ಜಪ, ಅಖಂಡ ತುಳಸಿ ಪಾರಾಯಣ ದಿನದ 24 ಗಂಟೆಗಳ ಕಾಲ ನಡೆಯುತ್ತಿರುತ್ತದೆ.ಈ ರೀತಿಯ ದೇವರ ಪಾರಾಯಣಕ್ಕಾಗಿ ಹತ್ತು ಮಂದಿಯನ್ನು ನಿಯೋಜಿಸಲಾಗಿದೆ ಇದರ ಸೌಂದರ್ಯತೆಯ ನಿಮಗೆ ಅದ್ಭುತವಾಗಿ ಕಾಣುತ್ತದೆ. 

5)ರಾಮರಾಜ್ಯ ಮಂದಿರ: ಮಧ್ಯಪ್ರದೇಶ 

ರಾಮರಾಜ ಎಂಬ ದೇವಸ್ಥಾನವು ಮಧ್ಯಪ್ರದೇಶದ ಓರ್ಚಾ ಎಂಬ ಸ್ಥಳದಲ್ಲಿದೆ. ಈ ದೇವಾಲಯದಲ್ಲಿ ರಾಮನನ್ನು ದೇವರಂತೆ ಅಲ್ಲ ರಾಜನಂತೆ ಪೂಜಿಸಲಾಗುತ್ತದೆ. ನಮ್ಮ ದೇಶದಲ್ಲಿ ಪ್ರಭು ಶ್ರೀರಾಮಚಂದ್ರರನ್ನು ರಾಜರ ರೂಪದಲ್ಲಿ ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿ ಪ್ರಭು ಶ್ರೀರಾಮಚಂದ್ರನು ಎಡಗಾಲನ್ನು ಬಲತೊಡೆಯ ಮೇಲೆ ಇಟ್ಟು ಪದ್ಮಾಸನದ ರೂಪದಲ್ಲಿ ತಮ್ಮ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಾರೆ. ಅವರು ತಮ್ಮ ಬಲಗೈಯಲ್ಲಿ ಕತ್ತಿಯನ್ನು ಸಹ ಹಿಡಿದಿದ್ದಾರೆ. ಈ ದೇವಾಲಯದಲ್ಲಿ ಪ್ರತಿದಿನವೂ ರಾಜರಿಗೆ ಆಯುಧ ನಮನವನ್ನು ನಡೆಸಲಾಗುತ್ತದೆ.ಈ ದೇವಾಲಯವನ್ನು ಭವ್ಯವಾದ ಕೋಟೆಯ ರೂಪದಲ್ಲಿ ನಿರ್ಮಿಸಲಾಗಿದೆ. ನಂಬಿಕೆಗಳ ಪ್ರಕಾರ ಹಗಲಿನಲ್ಲಿ ಪ್ರಭು ಶ್ರೀರಾಮಚಂದ್ರನು ಇಲ್ಲಿರುತ್ತಾರೆ, ರಾತ್ರಿ ಬೆಳಕಿನ ತರುವಾಯ ಆಯೋಧ್ಯಗೆ ತೆರಳುತ್ತಾರೆ. 

6)ತ್ರಿಪ್ರಯಾರ್ ರಾಮಸ್ವಾಮಿ ದೇವಸ್ಥಾನ: ಕೇರಳ


 ಕೇರಳದ ತ್ರಿಶೂಲ ಜಿಲ್ಲೆಯಲ್ಲಿ ಪ್ರಭು ಶ್ರೀರಾಮಚಂದ್ರರಿಗೆ ಸಮರ್ಪಿತವಾದ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪ್ರಭು ಶ್ರೀರಾಮಚಂದ್ರನ 6ಅಡಿ ವಿಗ್ರಹವನ್ನು ನಾವು ಕಣ್ತುಂಬಿ ನೋಡಬಹುದು. ಇಲ್ಲಿಯ ಶ್ರೀರಾಮಚಂದ್ರರು ಚತುರ್ಭುಜವನ್ನು ಹೊಂದಿದ್ದಾರೆ. ದಂತಕಥೆಗಳ ಪ್ರಕಾರ ಈ ಮೂರ್ತಿಯನ್ನು ಪ್ರಭು ಶ್ರೀಕೃಷ್ಣರೆ ಸ್ಥಾಪಿಸಿ ಪೂಜಿಸುತ್ತಿದ್ದರಂತೆ. ದ್ವಾರಕೆಯು  ಮುಳುಗಿದ ನಂತರ ಈ ವಿಗ್ರಹವು ಸಮುದ್ರದ ಪಾಲಾಗುತ್ತದೆ. ತ್ರಿಪ್ರಯಾರದ ಪಾಳೇಗಾರರಿಗೆ ಇದು ಸಮುದ್ರದಲ್ಲಿ ದೊರೆಯುತ್ತದೆ.ಈ ವಿಗ್ರಹವು ಬ್ರಹ್ಮ ವಿಷ್ಣು ಮಹೇಶ್ವರರ ಅಂಶವನ್ನು ಒಳಗೊಂಡಿದೆಯಂತೆ. ಹಾಗಾಗಿ ದೇವರನ್ನು ಇಲ್ಲಿ ತ್ರಿಮೂರ್ತಿಗಳ ಅವತಾರವೆಂದು ಪೂಜಿಸಲಾಗುತ್ತದೆ.

7) ರಾಮ್ ಟೇಕ್ ದೇವಸ್ಥಾನ:ಮಹಾರಾಷ್ಟ್ರ 

ಈ ದೇವಸ್ಥಾನ ಮಹಾರಾಷ್ಟ್ರದ ನಾಗಪುರದಲ್ಲಿ ಇದು ನಾಗಪುರದಿಂದ ಐವತ್ತು ಕಿಲೋಮೀಟರ್ ದೂರದಲ್ಲಿ ರಾಮಗಿರಿ ಯಲ್ಲಿದೆ. ಈ ದೇವಾಲಯ ನೆಲಮಟ್ಟದಿಂದ 350 ಮೀಟರ್ ಎತ್ತರದಲ್ಲಿ ರಾಮ್ಟೆಕ್ ದೇವಸ್ಥಾನವು ಅತಿಸುಂದರವಾಗಿ ನಿರ್ಮಾಣವಾಗಿದೆ. ಏಕೆಂದರೆ ನಿಮಗೆ ವಿಚಿತ್ರ ಏನಸುತ್ತಿರಬಹುದು ಅದರ ಅರ್ಥ ತಿಳಿದರೆ ನಿಮಗೆ ಬಹಳ ವಿಸ್ಮಯ ಅನಿಸುತ್ತದೆ. ಏಕೆಂದರೆ ನಾಗಪುರಿ ಭಾಷೆಯಲ್ಲಿರಾಮ್ ಟೇಕ್ ಅಂದರೆ  ಶಪಥ ಎಂದರ್ಥ. ಸೀತಾಮಾತೆಯ ಹುಡುಕಾಟದಲ್ಲಿ ಪ್ರಭು ಶ್ರೀರಾಮಚಂದ್ರನು ವಿಶ್ರಾಂತಿ ಇಲ್ಲದೆ ದುಷ್ಟ ದಾನವರ ದಮನಕ್ಕೆ ಶಪಥ ಮಾಡಿದ ಸ್ಥಳವಾಗಿದೆ. ಈ ಮಂದಿರದ ಸಮೀಪದಲ್ಲಿ ಅಗಸ್ತ್ಯ ಋಷಿಗಳ ಆಶ್ರಮ ಇರುತ್ತದೆ ಅವರ ತಪಸ್ಸಿಗೆ ರಕ್ಕಸರು ನೋವನ್ನುಂಟು ಮಾಡುತ್ತಿರುತ್ತಾರೆ, ಅಷ್ಟೇ ಅಲ್ಲದೆ ಅವರ ಮಾರಣಹೋಮವನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಈ ಭಾಗಕ್ಕೆ ಬಂದಂತಹ ಪ್ರಭು ಶ್ರೀರಾಮ ರಕ್ಕಸರನ್ನು ದಮನ ಮಾಡುವ ಶಪಥವನ್ನು ಮಾಡುತ್ತಾರೆ ಮತ್ತು  ಶಪಥವನ್ನು ಕಾರ್ಯೋನ್ಮುಖ ಗೊಳಿಸುತ್ತಾರೆ. ರಾಮ್ಟೆಕ್ ನಲ್ಲಿ ಯಾವುದೇ ಶಪಥವನ್ನು ಮಾಡಿದರೂ ಅದು ನೆರವೇರುತ್ತದೆ ಎಂದು ಭಕ್ತರ ವಿಶ್ವಾಸವಾಗಿದೆ. ರಾಮ್ಟೆಕ್ ದೇವಸ್ಥಾನದಲ್ಲಿ ರಾಮ-ಸೀತೆ ಪ್ರಧಾನ ದೇವರು ಜೊತೆಗೆ ರಾಮ-ಲಕ್ಷ್ಮಣರ ತಾಯಿಯಾದ ಅಂತಹ ಕೌಶಲ್ಯ ಸುಮಿತ್ತ್ರೆರು ಸಹ ಪೂಜೆಯನ್ನು ಪಡೆಯುತ್ತಾರೆ.ಕವಿ ಕಾಳಿದಾಸನ ಮೇಘದೂತ ಕಾವ್ಯವನ್ನು ಬರೆದಿದ್ದು ಇದೇ ರಾಮ್ಟೆಕ್ ನಲ್ಲಿ.  

8) ಕುಂಭಕೋಣಂ ರಾಮಸ್ವಾಮಿ ದೇವಸ್ಥಾನ: ತಮಿಳುನಾಡು

ಈ ದೇವಾಲಯ ತಮಿಳುನಾಡಿನ ತಂಜಾವೂರಿನಲ್ಲಿ ಇದೆ ಇದು ದೇವಾಲಯಗಳ ಪಟ್ಟಣ ಎಂದು ಕರೆಯಲ್ಪಡುತ್ತದೆ. ಕುಂಭಕೋಣಂ ರಾಮಸ್ವಾಮಿ ದೇವಸ್ಥಾನ ಇವಾಗ ಈ ಭಾಗದಲ್ಲಿ ಮಂಚೂಣಿಯಲ್ಲಿ ಬರುತ್ತದೆ.ಈ ದೇವಸ್ಥಾನವನ್ನು೪೦೦ ವರ್ಷಗಳ ಹಿಂದೆ  ತಂಜಾವೂರಿನ ರಾಜ ಅಚ್ಚುತಮನ  ಕಾಲದಲ್ಲಿ ನಿರ್ಮಿಸಲಾಗಿದೆ.ಹಾಗೂ ಹನುಮಂತನನ್ನು ಪೂಜಿಸುತ್ತಾರೆ. ರಾಮ ಲಕ್ಷ್ಮಣ ಸೀತೆಯನ್ನು ಅಷ್ಟೇ ನೋಡದೆ ಭರತ ಶತ್ರುಘ್ನರನ್ನು ಸಹ ಇಲ್ಲಿ ಪೂಜಿಸುತ್ತಾರೆ.   ಭಕ್ತಾದಿಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವಾಗ ರಾಮಾಯಣದ ಸಂಪೂರ್ಣ ಪ್ರಮುಖ ಘಟನಾವಳಿಗಳ ಕೆತ್ತನೆಯನ್ನು ನೋಡಬಹುದು. 

9)ಒಂಟಿಮಿತ್ತ ಕೋದಂಡರಾಮ ದೇವಸ್ಥಾನ:ಆಂಧ್ರಪ್ರದೇಶ

 ಒಂಟಿ ಮಿತ್ತ ಕೋದಂಡರಾಮಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿಒಂಟಿ ಮಿತ್ತ ಎಂಬ ಸ್ಥಳದಲ್ಲಿ ನಿರ್ಮಾಣವಾಗಿದೆ.ಇಲ್ಲಿ ಪ್ರಭು ಶ್ರೀರಾಮಚಂದ್ರರ ವಿಗ್ರಹವು ಬಲಗೈಯಲ್ಲಿ ಬಿಲ್ಲು ಎಡಗೈಯಲ್ಲಿ ಬಾನವನ್ನು ಹಿಡಿದಿರುವ ಹಾಗೆ ನೋಡಬಹುದು. ಒಂಟಿ ಮಿತ್ತ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ವರ್ಷಾಂತ್ಯದವರೆಗೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.ವಿಜಯನಗರದ ಶೈಲಿಯಲ್ಲಿರುವ ದೇವಸ್ಥಾನದ ಎಲ್ಲರ ಗಮನ ಮತ್ತು ಮನಸ್ಸನ್ನು ತಲ್ಲನಗೊಳಿಸುತ್ತದೆ.ಈ ದೇವಾಲಯವನ್ನು ಕೋದಂಡರಾಮ ಸ್ವಾಮಿಯ ಭಕ್ತರಾದ ಅಂತಹ ಒತ್ತಡು ಮತ್ತು ವಿತ್ತುಡು  ಎಂಬ ಭಕ್ತಾದಿಗಳು ನಿರ್ಮಿಸಿದ್ದಾರೆ. ಇವರುಗಳು ಮೊದಲು ಕಳ್ಳರಾಗಿರುತ್ತಾರೆ.ಆನಂತರ ಅಪ್ರತಿಮ ರಾಮಭಕ್ತರಾಗಿ ಮಾರ್ಪಾಡು ಹೊಂದುತ್ತಾರೆ.ದೇವಸ್ಥಾನದ ನಿರ್ಮಾಣದ ನಂತರ ಇವರು ಇಲ್ಲಿಯೇ ಕಲ್ಲಾಗಿ ಮಾರ್ಪಾಡು ಹೊಂದಿದ್ದಾರೆ ಎಂದು ನಂಬಲಾಗಿದೆ. 

10)ಓಡಿಸ್ಸಾ ರಾಮಮಂದಿರ:ಓಡಿಸ್ಸಾ 

ಒಡಿಸ್ಸಾದ ಭುವನೇಶ್ವರದಲ್ಲಿರುವ ರಾಮಮಂದಿರ ಈ ಭಾಗದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ನಮ್ಮ ದೇಶದ ರಾಮಮಂದಿರಗಳಲ್ಲಿ ಸುಂದರವಾದ ಪ್ರಖ್ಯಾತ ದೇವಾಲಯವಾಗಿದೆ. 

ಈ ದೇವಾಲಯವು ರಾಮ ಲಕ್ಷ್ಮಣ ಸೀತೆಯರ ಸುಂದರ ವಿಗ್ರಹಗಳನ್ನು ಹೊಂದಿದೆ.ದೇವಸ್ಥಾನದ ಮುಖ್ಯ ಶಿಖರವು ರಾಜಧಾನಿಯ ಮೂಲೆಮೂಲೆಗಳಿಂದ ನಮಗೆ ಗೋಚರಿಸುತ್ತದೆ. ದೇವಸ್ಥಾನದಲ್ಲಿ ರಾಮ ಲಕ್ಷ್ಮಣ ಸೀತೆ ರಷ್ಟೇ ಅಲ್ಲದೆ ರಾಧಾಕೃಷ್ಣ, ದುರ್ಗಾಮಾತಾ, ಪಾರ್ವತಿದೇವಿ, ಕಾರ್ತಿಕೇಯ, ಪಂಚಮುಖಿ ಹನುಮಂತ ಅಸಂಖ್ಯಾತ ದೇವರಗಳ ವಿಗ್ರಹಗಳನ್ನು ಕಾಣಬಹುದು. 

ಕಾಮೆಂಟ್‌ಗಳಿಲ್ಲ

Top 5 Places to Visit Weather Temperature in Ooty Tamil Nadu

Top 5 Places to Visit Weather Temperature in Ooty Tamil Nadu  ಪ್ರಕೃತಿಯ ಸುಂದರ ನೀಲಗಿರಿ ಪರ್ವತ ಶ್ರೇಣಿಯ ಉಪಸ್ಥಿತಿಯ  ಮನಮೋಹಕ  ಪರಿಸರದ ಪ್ರಮುಖ ವೀಕ್ಷಣೆಯ...

Blogger ನಿಂದ ಸಾಮರ್ಥ್ಯಹೊಂದಿದೆ.