ಈ ಬ್ಲಾಗ್ ಅನ್ನು ಹುಡುಕಿ

Idagunji Ganapati Temple History

 

ಇಡುಗುಂಜಿ ಗಣಪತಿ ದೇವಾಲಯ:


 
 ಇಡಗುಂಜಿಯ ಗಣಪತಿ ದೇವಾಲಯ ಅದ್ಭುತವಾಗಿದೆ, ಸುಂದರವೂ ಹೌದು ಸದಾ ಹಚ್ಚ ಹಸಿರು ಪರಿಸರ ಹೊಂದಿರುವ ಕಡಿಮೆ ತಾಪಮಾನ ಇರುವ ಮನಮೋಹಕ ಸ್ಥಳವಾಗಿದೆ. ಇಡುಗುಂಜಿ ಗಣಪತಿ ದೇವಾಲಯದ ಇತಿಹಾಸ ಅದರ ಎಲ್ಲ ಮಾಹಿತಿ ಮುಂದೆ ತಿಳಿಯೋಣ.

ಇಡಗುಂಜಿ ಗಣಪತಿ ದೇವಾಲಯದ ವಿಳಾಸ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡುಗುಂಜಿ.  ಇದು ಕರ್ನಾಟಕದಲ್ಲಿ ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಚುಂಬಕ ಎನ್ನಬಹುದು. 

ಇಡುಗುಂಜಿ ಗಣಪತಿ ದೇವಾಲಯಕ್ಕೆ ಭೇಟಿ ನೀಡುವ ಸಮಯ; ದೇವಾಲಯಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬರುತ್ತಾರೆ. ಸಮಯ 6:00 ರಿಂದ 12.30 ಹಾಗೂ ಮಧ್ಯಾಹ್ನ 3 ರಿಂದ 8.00 ರವರೆಗೆ ಭಕ್ತರ ಭೇಟಿಗೆ ಸದಾ ಲಭ್ಯವಿರುತ್ತದೆ.

 ಇಡುಗುಂಜಿ ಗಣಪತಿ ದೇವಾಲಯದ ಇತಿಹಾಸ:

Idagunji Ganapati Temple

 ಈ ದೇವಾಲಯವೂ ಸುಂದರ ಹಸಿರು ಪಶ್ಚಿಮಘಟ್ಟಗಳಲ್ಲಿ ಸ್ಥಾಪನೆಯಾಗಿದೆ ಇದು ಕ್ರಿಸ್ತಶಕ ೪ನೇ - 5ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಹಾಗೂ ಇದು ಪ್ರಸಿದ್ಧ ದ್ರಾವಿಡ ಶೈಲಿಯಲ್ಲಿ ಸ್ಥಾಪನೆಯಾಗಿದೆ. ಇದರ ಸುಂದರತೆ ನಿಮ್ಮ ಕಣ್ಣು ತುಂಬುತ್ತದೆ.  ಇಡಗುಂಜಿಯ ಬಗ್ಗೆ ಒಂದು ಕಥೆಯಿದೆ:

 ಅದೇನಂದರೆ ::ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಭೂಲೋಕದಲ್ಲಿ ರಾಕ್ಷಸರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ವಾಲಕಿಲ್ಯ ಮುನಿಗಳಿಗೆ ಸೂಚಿಸುತ್ತಾನೆ.  ಅದಕ್ಕಾಗಿ ಮುನಿಗಳು ತಾವು ಹೋಮ-ಹವನಗಳನ್ನು ಮಾಡುತ್ತಾರೆ.  ಆದರೆ ಅದರಿಂದ ಸಿದ್ದಿ ಆಗೋದೆ  ಇಲ್ಲಾ. ಹಲವು ವಿಘ್ನಗಳು ಉಂಟಾಗುತ್ತದೆ , ಶ್ರೀ ಕೃಷ್ಣನ ಸೂಚನೆಯಂತೆ ನಾರದರು ಋಷಿಗಳನ್ನು ಸಂಪರ್ಕಿಸುತ್ತಾರೆ. ಆಗ ನಾರದರು ಇದಕ್ಕೆ ವಿಘ್ನೇಶ್ವರನೇ  ಪರಿಹಾರ ಎಂದರಿತು ಕೈಲಾಸಕ್ಕೆ ಹೋಗಿ ಶಿವ-ಪಾರ್ವತಿಯರನ್ನು ವಲಿಸಿ ಗಣಪತಿಯನ್ನು ಭೂಲೋಕಕ್ಕೆ ಕರೆದುಕೊಂಡುಬರುತ್ತಾರೆ. 

ಆದರೆ  ಮೊದಲೇ ತಿಂಡಿ ಪ್ರಿಯನಾದ ಗಣೇಶ ಇಲ್ಲಿ ಬಂದು ವಾಸ ಇರುವುದಕ್ಕೆ ಒಂದು ಶರತ್ತನ್ನುಹಾಕುತ್ತಾನೆ.   ಅದೇನು ಅಂತೀರಾ ನನಗೆ ಪಂಚಕಜ್ಜಾಯ ನೈವೇದ್ಯ ಬೇಕು ಯಾವತ್ತೂ ಪಂಚಕಜ್ಜಾಯ ಸಿಗೋದಿಲ್ಲವೊ  ನಾನು ಆವತ್ತು ವಾಪಸ್ ಕೈಲಸ್ಸಕ್ಕೆಬರುತ್ತೇನೆ ಅಂತ ಹೇಳ್ತಾನೆ.ವಾಲಖಿಲ್ಯಯರಿಗೆ ಕರಾರು ಹಾಕ್ತಾನೆ.  ಇದನ್ನು ಒಪ್ಪಿದ ಮುನಿಗಳು ಆತನನ್ನು ಕರೆತಂದು ''ಇಡಕುಂಜ'' ಎಂಬ ಪ್ರದೇಶಕ್ಕೆ ಬರುತ್ತಾರೆ. ಇದೇ ಮುಂದೆ ಶ್ರೀಕ್ಷೇತ್ರ "ಇಡುಗುಂಜಿ" ಆಗುತ್ತದೆ.  ಮಹಾಗಣಪತಿ ವಿಗ್ರಹವನ್ನು ದೇವಶಿಲ್ಪಿ ವಿಶ್ವಕರ್ಮಕೆತ್ತಿದ  ಮೂರ್ತಿಎನ್ನುತ್ತಾರೆ. ಇತಿಹಾಸ ತಜ್ಞರ ಪ್ರಕಾರ ಸುಮಾರು 5000 ವರ್ಷಗಳಷ್ಟು ಹಳೆಯ ಮೂರ್ತಿ ಇದು ಎನ್ನಲಾಗುತ್ತಿದೆ. ಇಡಗುಂಜಿಯ ಮಹತೋಭಾರ ಮಹಾಗಣಪತಿ ಅಂದರೆ ಸಾಮಾನ್ಯನಲ್ಲ; ಸೂಕ್ಷ್ಮವಾಗಿ ಗಮನಿಸಿ, ಜಗತ್ತಿನಲ್ಲಿರುವ ಎಲ್ಲಾ ಗಣಪತಿಯ ವಿಗ್ರಹಗಳು ಏಕದಂತ ಆದರೆ ಇಲ್ಲಿನ ಗಣೇಶ ಹಾಗಿಲ್ಲ. 

ಅದಕ್ಕೆ ಒಂದು ಕಥೆಯನ್ನು ಹೇಳ್ತೀನಿ ಕೇಳಿ ಮಹಾಗಣಪತಿಯೂ ತಿಂಡಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ, ಒಮ್ಮೆ ಗಜಾನನ ಮೋದಕ, ಚಕುಲಿ, ಪಂಚಕಜ್ಜಾಯ ಗಳನ್ನು ತಿಂದು ದಾರಿಯಲ್ಲಿ ಹೋಗುತ್ತಿರುವವಾಗ, ಹೊಟ್ಟೆ  ಒಡೆದು ಹೋಗೋ ಅನುಭವವಾಯಿತಂತೆ.  ಇನ್ನೇನು ಮಾಡೋದು ಅಂತ ಈ ಕಡೆ ಆ ನೋಡ್ತಾ ಇರುವಾಗಲೇ ಪಕ್ಕದಲ್ಲಿ ಒಂದು ಸರ್ಪ ಹೋಗುತ್ತಿತ್ತಂತೆ, ಗಣೇಶ ಆ ಹಾವನೆ ತನ್ನ ಹೊಟ್ಟೆಗೆ ಬಿಗಿದು ಕಟ್ಟಿದನಂತೆ, ನಂತರ ದೂರದಿಂದ ನೋಡಿದ ಚಂದಿರಾ  ಕಿಲ ಕಿಲಾ ಅಂತಾ ನಕ್ಕು ಬಿಟ್ಟ. ಇದನ್ನ ನೋಡಿ ಕ್ರೋದಗೊಂಡ ಗಜಾನನ ತನ್ನ ಒಂದು  ದಂತವನ್ನು  ಮುರಿದುಚಂದ್ರನ ಕಡೆಗೆ ಎಸೆಯುತ್ತಾನೆ.  ಆನಂತರ ಗಣಪತಿಗೆ ಏಕದಂತ  ಅನ್ನೋದು ಪ್ರತೀತಿ ನಾನ್ಯಾಕೆ ಈ ಕಥೆನಾ ಹೇಳಿದೆ ಅಂತ ನಿಮಗೆ ಈಗ ಅರ್ಥ ಆಗಿರಬಹುದು, ಅಲ್ವಾ ನಿಮ್ಮ ಊಹೆ ನಿಜ. ಇಲ್ಲಿ ಬಂದು ನೆಲೆಯುರಿದ ಗಣಪತಿ ಮೇಲೆ ನಾನು ಹೇಳಿದ ಪ್ರಸಂಗ ಆಗೋದಕ್ಕಿಂತ ಮೊದಲಿನ ಗಣೇಶ ಈ ಸ್ಥಿತಿಯ ಗಣಪ ನಿಮಗೆ ನೋಡಲು ಸಿಗುವುದು ಇಡಗುಂಜಿಯಲ್ಲಿ ಮಾತ್ರ. ಇದೇ ತರಹದ ಗಣೇಶನ ವಿಗ್ರಹ ಗೋಕರ್ಣದಲ್ಲಿದೆ, ಆದರೆ ಅಲ್ಲಿರುವವನು ಏಕದಂತ. 

 ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ  ತಾಲೂಕಿನಿಂದ ೧೪  ಕಿಲೋಮೀಟರ್ ದೂರ ಇರೋ ನಿಸರ್ಗ, ರಮಣೀಯ ಕ್ಷೇತ್ರ ಈ ಕ್ಷೇತ್ರಕ್ಕೆ ಹಿಂದೆ  ಇಡಾಕುಂಜವನ,ಕುಂಜವನ ,ಗುಂಜಾವನ ,ಎಂಬ ಪುರಾತನ ಹೆಸರುಗಳು ಇದ್ದವು. ಕ್ರಮೇಣ ಅದು ಇಡಗುಂಜಿ ಆಯಿತು.ಸುತ್ತಲೂ  ಬೆಟ್ಟಗಳಿಂದ ಆವರಿಸಿರುವ ಇಡಗುಂಜಿ ದೇವಸ್ಥಾನ. ಇಳಿಜಾರಿನ ಪ್ರದೇಶದಲ್ಲಿ ಇದೆ. ಇಲ್ಲಿನ ದ್ವಿ ಬಾಹುವೀನ ಗಣಪತಿ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಕಪ್ಪುಕಲ್ಲಿನ ಅತಿ ಸುಂದರ ಮೂರ್ತಿ ಬಲಗೈಯಲ್ಲಿ ಪದ್ಮ ಹಾಗೂ ಎಡಗೈಯಲ್ಲಿ ಮೋದಕ ಹಿಡಿದು ನಿಂತಿರುವ ವಿಶೇಷ ಗಣಪತಿಗೆ ಮೇಲೆ ಹೇಳಿದಂತೆ ಎರಡು ದಂತಗಳಿವೆ.  ಬೃಹದಾಕಾರದ ಹೊಟ್ಟೆಯಿದ್ದು  ಹೊಟ್ಟೆಗೆ ಎಲ್ಲಾ ಕಡೆ ಇರುವಂತೆ ಸರ್ಪವನ್ನು ಬಿಗಿದಿಲ್ಲ

ದೇವಸ್ಥಾನದ ಮುಂಭಾಗದಲ್ಲಿ ವಾಲಕಿಲ್ಯ ಋಷಿಗಳ ಪಾಠಶಾಲೆಯಿದೆ.  ಇನ್ನೂ ಸ್ವಲ್ಪ ಮುಂದೆ ಪುಷ್ಕರಿಣಿಯಿದೆ, ಎಡಭಾಗದಲ್ಲಿ ಯಾಗಶಾಲೆ ಮೇಲಿನ ಪ್ರದೇಶದಲ್ಲಿ ಮಯೂರ ಪ್ರಸಾದ ಭೋಜನ ಶಾಲೆಯಿದೆ. ಪ್ರತಿ ಸಂಕಷ್ಟಿ ಹಾಗೂ ಚೌತಿಯಂದು ಸಾವಿರಾರು ಭಕ್ತಾದಿಗಳು ಬಾಲಗಣಪತಿ ದರ್ಶನ ಪಡೆದು ಪುನೀತರಾಗುತ್ತಾರೆ.ಇಲ್ಲಿ ಉಳಿದ ದಿನಗಳಲ್ಲಿ ಪ್ರಸಾದವನ್ನ  ಕೇಳಲಾಗುತ್ತದೆ. ಮಹಾಗಣಪತಿಯ ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತದೆ, ಅದರಂತೆ ನಡೆದುಕೊಳ್ಳುತ್ತಾರೆ ಕೂಡಾ. ಇಡಗುಂಜಿಯ ಮಹಾಗಣಪತಿಯ ಬಳಿ ಭಕ್ತಿಯಿಂದ ಪ್ರಾರ್ಥಿಸಿ ಕೊಂಡರೆ ಆಗದ ಕೆಲಸ ಇಲ್ಲ ಅನ್ನೋದು ಇಲ್ಲಿನ ಜನರ ನಂಬಿಕೆ.

ಇದಕೆ ಒಂದು ತಾಜಾ ತಾಜಾ ಉದಾಹರಣೆ ಎಂದರೆ ಈಗಿನ ಸರಿಗಮಪ ಸೀಸನ್ ರಣರಪ್ಆಗಿದ್ದ ಗುರುಕಿರಣ್ ಹೆಗಡೆ,  ಚಿಕ್ಕವನಿದ್ದಾಗ ಮೈತುಂಬಾ ಸಿಡುಬಾಗಿ ಆ ಮಗುವಿನ ಆಸೆಯೇ ಬಿಟ್ಟು ಕೊನೆಯ ಪ್ರಯತ್ನವಾಗಿ ಇಡಗುಂಜಿಯ ಮಹಾಗಣಪತಿಯಲ್ಲಿ ಕಡಿಮೆಯಾದರೆ ತುಲಾಭಾರ ಮಾಡಿಕೊಡುತ್ತೇನೆ ಅಂತ ಹರಕೆ ಹೊತ್ತರಂತೆ. ಅದಾಗಿ ಎರಡು ಗಂಟೆಯಲ್ಲಿ ಸಿಡುಬಿನ ಗುಳ್ಳೆಗಳು ಮಾಯವಾಯಿತು ಅಂತ; ಅವನ ತಾಯಿ ಸರಿಗಮಪ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಮಹಾಗಣಪತಿಯನ್ನು  ನಂಬಿದವರನ್ನು ಎಂದು ಕೈಬಿಡುವುದಿಲ್ಲ ಅನ್ನೋದಕ್ಕೆ ಸಾಕಷ್ಟು ಪುರಾವೆಗಳಿವೆ.

ಮತ್ತೆ ಇಲ್ಲಿ ಬರುವ ಭಕ್ತರು ತಮ್ಮ ಇಷ್ಟಾರ್ತಿಗಾಗಿ ಪೂಜೆಗಳನ್ನು ಮಾಡುತ್ತಾರೆ. ಯಾರಾದರೂ ಹೊಸ ವಾಹನಗಳನ್ನು ತಂದರೆ ಪೂಜೆಗೆ  ಮೊದಲು ಇಲ್ಲಿ ಬರುತ್ತಾರೆ.ಮದುವೆಯ ಚಿಟ್ (ಕವಲು )ಕಟ್ಟಲು ಬರುತ್ತಾರೆ ಬಲಗಡೆ ಬಂದರೆ ಒಳ್ಳೆಯದು ಎಡಕ್ಕೆ  ಬಂದರೆ ದುಖ ಅಂತ ಸ್ಥಳೀಯ ಜನರ ನಂಬಿಕೆ.

ಇಡಗುಂಜಿ ಗಣಪತಿ ದೇವಾಲಯದ ಭೇಟಿನೀಡುವ ಪ್ರಸಿದ್ಧ ಸ್ಥಳಗಳು:

೧)ವೆಸ್ಟ್ ಕೋಸ್ಟ್  ಅಡವೆಂಚರ್ಸ್;

West Coast Adventures

ಪಶ್ಚಿಮ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಸಾಹಸಗಳು ನಡೆಸಲು  ಸ್ಕೂಬಾ ಡೈವಿಂಗ್ ಅನುಭವಿಸಲು ಯೋಗ್ಯವಾಗಿದೆ ಮತ್ತು ಅದನ್ನು ಜೀವಮಾನದ ಅನುಭವ ಎಂದು ಹೇಳಬಹುದು. ಸ್ಕೂಬಾ ಡೈವ್‌ನ ಎಲ್ಲಾ ಸಹಕಾರ ಮತ್ತು ಸುಗಮವಾಗಿರುತ್ತವೆ. ಸ್ಕೂಬಾ ಡೈವ್‌ನಲ್ಲಿ ಎಲ್ಲಾ ಮತ್ಸ್ಯ ಸುಂದರಿಯರನ್ನು ಪರಮ ಸುಂದರಿಯರಂತೆ ನೋಡಬಹುದು. ನೀವು ಇಲ್ಲಿ ಹೊಸ ಅನುಭವವನು ಮನರಂಜನೆಯನ್ನು ಪಡೆಯಬಹುದು,

೨)ಕೊಡಲಮಾನೆ  ಶ್ರೀ ವಿಷ್ಣುಮೂರ್ತಿ ದೇವಾಲಯ;

Vishnu  Murti Temple

 ಇದು ಕೊಡ್ಲಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೈದಿಕ ಹಿಂದೂ ವಾಸ್ತುಶೈಲಿಯ ಮೇಲೆ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಲಾದ  ದೇವಾಲಯ. ಇಲ್ಲಿ ಮುಕ್ತಿಯನ್ನು ನೀಡುವ ಏಕೈಕ ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದೇವಾಲಯ, ಈ ದೇವಾಲಯವು ಇಡಗುಂಜಿಯಿಂದ ೧ ಕಿಲೋಮೀಟರ್ ಮತ್ತು ಹೊನ್ನಾವರ ತಾಲೂಕಿನಿಂದ 23 ಕಿಮೀ ದೂರದಲ್ಲಿದೆ.    

೩)ಮುರ್ಡೇಶ್ವರ ದೇವಾಲಯ ;

Murdeshwara Temple

ಮುರ್ಡೇಶ್ವರ ದೇವಾಲಯವನ್ನು ಮೂರು ಕಡೆ ಅರಬ್ಬೀ ಸಮುದ್ರದ ನೀರಿನಿಂದ ಸುತ್ತುವರೆದಿರುವ ದೇವಾಲಯ, ಇದು ಶಿವನ ಅದ್ಭುತ ಪ್ರತಿಮೆಯನ್ನು ಹೊಂದಿರುವ ಜಾಗ ಇಲ್ಲಿ ಪ್ರವಾಸಿಗರು ಬಹ ಉತ್ಸುಕರಾಗಿ ಭೇಟಿನೀಡುತ್ತಾರೆ. ವಿದೇಶಿಗರು, ಭಾರತೀಯರು, ನವದಂಪತಿಗಳು ಹಾಗು ಪರಿವಾರದ ಮೂಲಕ ಭೇಟಿನೀಡುವ ಸುಂದರ ಸ್ಥಳವಾಗಿದೆ. 

೪)ಕೇತಪಯ್ಯ ನಾರಾಯಣ ದೇವಾಲಯ;

Shree Narayana Temple

ಕೇತಪ್ಪಯ್ಯ ನಾರಾಯಣ ದೇವಾಲಯ ಎಂದೂ ಕರೆಯಲ್ಪಡುವ ಮುರುಡೇಶ್ವರ ದೇವಾಲಯವು ಮೂರು ಕಡೆಯಿಂದ ಅರಬ್ಬಿ ಸಮುದ್ರದಿಂದ ಆವೃತವಾಗಿದೆ. ಈ ದೇವಾಲಯವು ಆಕರ್ಷಕ ವಾಸ್ತುಶೈಲಿಯನ್ನು ಹೊಂದಿದೆ, ದೇವಾಲಯದ ಪ್ರವೇಶದ್ವಾರದಲ್ಲಿ ನಿರ್ಮಿಸಲಾದ 20 ಅಂತಸ್ತಿನ ಗೋಪುರ, 18 ನೇ ಮಹಡಿಯವರೆಗೆ ಭಕ್ತರನ್ನು ಸಾಗಿಸಲು 2 ಲಿಫ್ಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಇದು ಅತ್ಯಂತ ಶಾಂತಿಯುತವಾಗಿದೆ  ಜನರು ಭಾರತದಲ್ಲಿನ ಅತ್ಯಂತ ಇಚ್ಛೆಯಿಂದ ಭೇಟಿನೀಡುತ್ತಾರೆ. 

೫)ಅಪ್ಸರಕೊಂಡ ಜಲಪಾತ;

Apsarakonda Falls

 ಇದು ಹಸಿರು ಕಾಡಿನಲ್ಲಿ ಸುಂದರವಾದ ಜಲಪಾತ. ಇದು ಹೊನ್ನಾವರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಇದು ಸಣ್ಣ ಜಲಪಾತವಾಗಿದೆ. ಜಲಪಾತವು 50 ಅಡಿ ಎತ್ತರದಿಂದ  ನೈಸರ್ಗಿಕವಾಗಿ  ಕೆಳಗೆ ಬೀಳುತ್ತದೆ. ಇದು "ದೇವರ ಕೊಳ" ಎಂದು ಕರೆಯುತ್ತಾರೆ.ಜಲಪಾತವನ್ನು ತಲುಪಲು ನೀವು 150 ಮೆಟ್ಟಿಲುಗಳನ್ನು ಹತ್ತಬೇಕು.. ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲ ಮಾನ್ಸೂನ್.

೬)ಇಕೋ  ಬೀಚ್;

Eco Beach

  ಈ ಬೀಚ್ ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಬೂದು ನೀರಿನ ಸಂಸ್ಕರಣಾ ಘಟಕಗಳು, ಆಸನ ವ್ಯವಸ್ಥೆಗಳು, ಶುದ್ಧ ಕುಡಿಯುವ ನೀರು, ವಾಶ್‌ರೂಮ್, ಸ್ನಾನದ ಸೌಲಭ್ಯ, ಅಂಗವಿಕಲ ಸ್ನೇಹಿಯಾಗಿದೆ. ಮತ್ತು ಸಾಮಾನ್ಯ ಶೌಚಾಲಯಗಳು, ಪಾರ್ಕಿಂಗ್ ಸೌಲಭ್ಯಗಳು, ಸೌರ ವಿದ್ಯುತ್ ಸ್ಥಾವರಗಳು ಮತ್ತು ಸೌರ ದೀಪಗಳು ಇಕೋ ಬೀಚ್ ಬಳಿ ಅಸ್ಪೃಶ್ಯ ಬೀಚ್ ಇದೆ, ಅಲ್ಲಿ ನೀವು ಬೀಚ್ ಅನ್ನು ಏಕಾಂಗಿಯಾಗಿ ಆನಂದಿಸಬಹುದು. ಯಾವುದೇ ಜನಸಂದಣಿ ಇಲ್ಲ .ನೀವು ಮತ್ತು ದ್ವೀಪ ಮಾತ್ರ

೭)ಕೊಲೊನಲ್ ಪಿಲ್ಲರ್;

Colonel Pillers

 ಹೊನ್ನಾವರದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯ ರಸ್ತೆಯಿಂದ ನೀವು ಈ ಪಿಲ್ಲರ್ ಅನ್ನು ನೋಡಬಹುದು. ಸೂರ್ಯಾಸ್ತವನ್ನು ವೀಕ್ಷಿಸಲು ಉತ್ತಮ ಸ್ಥಳ. ಇದು ಬ್ರಿಟಿಷ್ ಸೇನೆಯ ಕರ್ನಲ್ ಹಿಲ್‌ಗಾಗಿ ನಿರ್ಮಿಸಲಾದ ಸ್ಮಾರಕವಾಗಿದೆ. ಅವರ ಮುಖ್ಯ ಕಮಾಂಡರ್ (ಕರ್ನಲ್ ಹಿಲ್) ಜನವರಿ 20, 1854 ರಂದು ಗೆರುಸೊಪ್ಪಾ ರಾಣಿಯೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಬ್ರಿಟಿಷರು 1854 ರಲ್ಲಿ ಹೊನ್ನಾವರದ ಗುಡ್ಡದ ಮೇಲೆ ಕರ್ನಲ್ ಗೌರವಾರ್ಥವಾಗಿ ಬೃಹತ್ ಅಂಕಣವನ್ನು ನಿರ್ಮಿಸಿದರು.ಸುತ್ತಮುತ್ತಲಿನ ಉದ್ಯಾನವನಕ್ಕೆ ಪ್ರವಾಸಿಗರು ಭೇಟಿ ನೀಡುತ್ತಾರೆ. 

೮)ಶ್ರೀ ಬೆಣ್ಣೆ  ಮಹಾಗಣಪತಿ ದೇವಾಲಯ ಕೈಕಟಗೇರಿ;

Benne Maha Ganapati Temple

ಹೊನ್ನಾವರದಲ್ಲಿ ಭೇಟಿ ನೀಡಲು ಇದು ಉತ್ತಮ ಸ್ಥಳವಾಗಿದೆ. ಈ ಸ್ಥಳದ ಸುತ್ತಮುತ್ತಲಿನ ವಾತಾವರಣದಲ್ಲಿ ಅತ್ಯುತ್ತಮ ಮತ್ತು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ..ನೀವು ಒಮ್ಮೆ ಭೇಟಿ ನೀಡಬೇಕು.

ದೇವಾಲಯವು ಸರಳತೆಯೊಂದಿಗೆ ಅದ್ಭುತವಾಗಿದೆ ಮತ್ತು ಸ್ಥಳವು ತುಂಬಾ ಚೆನ್ನಾಗಿದೆ.. ದೇವಾಲಯವು ಅರೆಕಾ ಪ್ಲಾಂಟ್‌ನಲ್ಲಿದೆ. 

೯)ಶ್ರೀ ಧಾರನಾಥ್ ದೇವಾಲಯ;

Dharanath Temple

ಸ್ಥಳವು ತುಂಬಾ  ದೈವಿಕವಾಗಿದೆ. ಗರ್ಭಗುಡಿ ಇದು ಮೂರನೇ ಆತ್ಮಲಿಂಗ ದೇವಾಲಯವಾಗಿದ್ದು, ಮುಖ್ಯ ದೇವರು ಶಿವನನ್ನು ಲಿಂಗದ ಪೂರ್ವದಲ್ಲಿ ಧರನಾಥೇಶ್ವರ ಎಂದು ಪೂಜಿಸಲಾಗುತ್ತದೆ. ಮಹಾಬಲೇಶ್ವರ ಆತ್ಮಲಿಂಗದ ಪೂಣಲ್ ಬಿದ್ದ ಸ್ಥಳವಾಗಿದೆ ನಂಬಲಾಗಿದೆ.  ಇತರ ಪಾಚ ಆತ್ಮಲಿಂಗ ಸ್ಥಲವೆಂದರೆ ಕಾರವಾರ, ಗೋಕರ್ಣ, ಗುಣವತೇಶ್ವರ ಮತ್ತು ಮುರ್ಡೇಶ್ವರರು ಮತ್ತು ಒಂದೇ ದಿನದಲ್ಲಿ ಎಲ್ಲಾ ಐದು ದೇವಾಲಯಗಳಿಗೆ ಭೇಟಿ ನೀಡಿದರೆ ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ .ಇದು  ಕರಾವಳಿ ಪ್ರದೇಶದಲ್ಲಿ ಕಂಡುಬರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ  ಇದರ ಇತಿಹಾಸವು ಕ್ರಿ ಶ 1500  ಮೊದಲಿನಾ ದೇವಾಲಯವು ಸಾಂಪ್ರದಾಯಿಕ ಶಿಲ್ಪಗಳು ಮತ್ತು ಮಾದರಿಗಳನ್ನು ಹೊಂದಿರುವ ಎಲ್ಲಾ ಕಲ್ಲುಗಳಲ್ಲಿ (ಕಪ್ಪು ಕಲ್ಲುಗಳು) ನಿರ್ಮಿಸಲಾಗಿದೆ.  

೧೦)ಶ್ರೀ ಮರವಂತೆ ದೇವಾಲಯ;

Maravante  Temple

ಮರವಂತೆ ದೇವಾಲಯವು  ಕುಂಭಾಶಿಯ ಬೆಟ್ಟದ ಮೇಲಿರುವ ಆನೆಗುಡ್ಡೆ ವಿನಾಯಕ ದೇವಾಲಯವು ಗಣೇಶನಿಗೆ ಸಮರ್ಪಿತವಾಗಿದೆ. ಈ ಸ್ಥಳದಲ್ಲಿಯೇ ಅಗಸ್ತ್ಯ ಋಷಿ ಇಂದಿರಾರನ್ನು ಆಕರ್ಷಿಸಲು ತಪಸ್ಸು ಮಾಡಿದರು ಎಂದು ನಂಬಲಾಗಿದೆ.ಇದು ಮರವಂತೆ ೨೨ ಕಿಮಿ ದೂರದಲ್ಲಿದೆ.    

ರಸ್ತೆ ಮಾರ್ಗವಾಗಿ:

ಪವಿತ್ರ ಕ್ಷೇತ್ರಕ್ಕೆ ತಲುಪೋದು ಹೇಗೆ ಉಡುಪಿ ಕಡೆಯಿಂದ ಬರುವವರಿಗೆ, ಮೊದಲು ಮಂಕಿ ಎಂಬ ಊರು ಸಿಗುತ್ತೆ, ಅಲ್ಲಿಂದ ೪ ಕಿಲೋಮೀಟರ್ ಹೆದ್ದಾರಿಯಲ್ಲಿ ಸಂಚರಿಸಿದರೆ ಇಡಗುಂಜಿಯ ಸ್ವಾಗತ ಗೋಪುರ ಸಿಗುತ್ತದೆ. ಇಲ್ಲಿಂದ  ಒಳಹಾದಿಯಾಗಿ ೪ ಕಿಲೋಮೀಟರ್ ಸಂಚರಿಸಿದರೆ ದೇವಸ್ಥಾನ ಸಿಗುತ್ತದೆ. 

ಬೆಂಗಳೂರಿನಿಂದ ಬರೋರು ಕೂಡ ಹೊನ್ನಾವರದಲ್ಲಿ ಇಳಿದುಕೊಂಡು ಅಲ್ಲಿಂದ ದಕ್ಷಿಣಕ್ಕೆ  ೧೦ ಕಿಲೋಮೀಟರ್ ಹೆದ್ದಾರಿಯಲ್ಲಿ ಸಂಚರಿಸುತ್ತ  ದೇವಸ್ಥಾನದ ಸ್ವಾಗತಗೋಪುರ ಕಾಣಿಸುತ್ತೆ. ಇಡಗುಂಜಿಗೆ ಹೊನ್ನಾವರದಿಂದ ಸರಕಾರಿ ಬಸ್ಸುಗಳು ಆಗಾಗ ಇವೆ, ಹೆಚ್ಚಾಗಿ ಮ್ಯಾಕ್ಸಿಕ್ಯಾಬ್ ಗಳನ್ನ ಅವಲಂಬಿಸಬೇಕು ಖಾಸಗಿ ವಾಹನದಲ್ಲಿ ಬಂದರೇ ಬೆಸ್ಟು . 

ಹುಬ್ಬಳ್ಳಿಯಿಂದ-ಇಡಗುಂಜಿ ೧೮೯ ಕಿಮೀ, 

More Map Link :https://www.google.com/maps/place/Sri+Idagunji+Mahaganapati+Temple/@14.2302941,74.4921025,17z/data=!3m1!4b1!4m6!3m5!1s0x3bbc3953dd4b13d3:0x6f4c365c57a09ede!8m2!3d14.2302889!4d74.4942912!16s%2Fm%2F0qfrrkg?authuser=1

ರೈಲ್ವೆ ಮಾರ್ಗ :

ಮಂಕಿ ಸ್ಟೇಷನ್ನಿಂದ ೦೭. ಕಿಮಿ 

ಹೊನ್ನಾವರ -೬. ೯ ಕಿಮಿ 

ಕುಮಟಾ -೨೨.೪೩ ಕಿಮಿ 

ಮುರ್ಡೇಶ್ವರ-೧೫ ಕಿಮಿ 

ಚಿತ್ರಪುರ ಹಾಲ್ಟ್ -೨೩ ಕಿಮಿ 

ಭಟ್ಕಳ-೨೯ ಕಿಮಿ 

ಶಿರೂರ್-೩೬ ಕಿಮಿ

ವಿಮಾನ ಮಾರ್ಗ :

ಹುಬ್ಬಳಿ ವಿಮಾನ ನಿಲ್ದಾಣದಿಂದ-೧೧೯ ಕಿಮಿ 

ಮಂಗಳೂರು ವಿಮಾನ ನಿಲ್ದಾಣದಿಂದ-೧೬೬ ಕಿಮಿ 

ಬೆಂಗಳೂರು ವಿಮಾನ ನಿಲ್ದಾಣದಿಂದ-೫೦೭ ಕಿಮಿ 

ಬೆಳಗಾವಿ ವಿಮಾನ ನಿಲ್ದಾಣದಿಂದ-೨೫೬ ಕಿಮಿ 

ಇಡಗುಂಜಿ ಗಣಪತಿ ದೇವಸ್ಥಾನದ ಸಮಯ: ದೇವಾಲಯವನ್ನು ಬೆಳಿಗ್ಗೆ 6/8 ರಿಂದ ರಾತ್ರಿ 8 ರವರೆಗೆ ದರ್ಶನಕ್ಕಾಗಿ ಲಭ್ಯವಿದೆ.  ಮಧ್ಯಾಹ್ನ 12:30 ರಿಂದ ಮಧ್ಯಾಹ್ನ 3 ರವರೆಗೆ ಮುಚ್ಚಲಾಗುತ್ತದೆ.

ಬಂದ ಭಕ್ತರಿಗಿಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯಿದೆ. ಮಧ್ಯಾಹ್ನ ಮಹಾಪೂಜೆಗೆ ಒಂದು ಗಂಟೆ ಮುಂಚೆ ದೇವಾಲಯದಲ್ಲಿ ಉಚಿತ ಊಟದ ಪಾಸುಗಳನ್ನು ವಿತರಿಸುತ್ತಾರೆ. ಅದನ್ನು ಪಡೆದೇ ಊಟಕ್ಕೆ ತೆರಳಬೇಕು ಇದರ ಬಗ್ಗೆ ದೇವಸ್ಥಾನದಲ್ಲಿ ಪ್ರಕಟನೆ ಮಾಡುತ್ತಾರೆ. ಪ್ರಸಾದ ಅಂದ್ರೆ ಪಂಚಕಜ್ಜಾಯ ಮಹಾಗಣಪತಿ ನಿಮ್ಮೆಲ್ಲರಿಗೂ ಬಂದಂತಹ ವಿಘ್ನಗಳನ್ನು ನಿವಾರಿಸಲಿ 

ಕಾಮೆಂಟ್‌ಗಳಿಲ್ಲ

Top 5 Places to Visit Weather Temperature in Ooty Tamil Nadu

Top 5 Places to Visit Weather Temperature in Ooty Tamil Nadu  ಪ್ರಕೃತಿಯ ಸುಂದರ ನೀಲಗಿರಿ ಪರ್ವತ ಶ್ರೇಣಿಯ ಉಪಸ್ಥಿತಿಯ  ಮನಮೋಹಕ  ಪರಿಸರದ ಪ್ರಮುಖ ವೀಕ್ಷಣೆಯ...

Blogger ನಿಂದ ಸಾಮರ್ಥ್ಯಹೊಂದಿದೆ.