Shri Siddharoodha Swamy Math,Pooja&Arati, Hubali,dharawad Bus stand,Railway,Directions,History,jatra 2023,Karnataka India - Temple Tour Guide.
ಶ್ರೀ ಸಿದ್ಧಾರೂಢ ಸ್ವಾಮಿಗಳು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ತಮ್ಮ೧೮೭೭ ರಿಂದ ಅಮೋಘ ದಿನಗಳನ್ನು ಕಳೆದಿದ್ದಾರ.
Shri Siddharoodha Swamy Math |
ಶ್ರೀ ಸಿದ್ಧಾರೂಢ ಮಠ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಇಲ್ಲಿ ಬಂಧು ಬೇಡಿದ ಭಕ್ತರ ಕೋರಿಕೆ ಎಲ್ಲಾ ನೆರವೇರುತ್ತದೆ.siddharoodha math hubli
$. ಶ್ರೀ ಸಿದ್ಧಾರೂಢರ ಬಗೆಗೆ ಮಾಹಿತಿ :
ಜನನ :1836
ಮರಣ: 1929
ಊರು :ವಂಶದುರ್ಗ (ಬಿದರಿಕೋಟೆ)
ತಂದೆ: ಶಾಂತಪ್ಪ
ತಾಯಿ ಮಲ್ಲಮ್ಮ
ಇವರ ಕಿರಿಯ ಮಗನೇ ಸಿದ್ದನು.
ಗುರುಗಳು: ಗಜದಂಡ ಸ್ವಾಮಿ
$ ಸಿದ್ಧಾರೂಢರ ಪವಾಡ:
ಇವರು ಚಿಕ್ಕವರಿದ್ದಾಗ ತಮ್ಮ ಹಳ್ಳಿಯಲ್ಲಿ ಒಂದು ಎಮ್ಮೆಗೆ ಸಾಯುವಂತೆ ಶಪಿಸಿದರು ಅದು ನಿಜವಾಗಿಯೂ ಎಮ್ಮೆ ಸತ್ತಾಗ ಅವರ ತಾಯಿಯ ಮನವಿಯಿಂದ ಕೇಳಿಕೊಂಡರು ಅದರಿಂದ ಎಮ್ಮೆಯನ್ನು ಮರಳಿ ಜೀವಿಸಿದರು
ಇವರು ಅಸಂಖ್ಯಾತ ಪವಾಡಗಳನ್ನು ಮಾಡಿದ್ದಾರೆ 16ನೇ ಶತಮಾನದ ಸಂತ ತತ್ವಜ್ಞಾನಿ ನಿಜಗುಣಶಿವಯೋಗಿಗಳು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಜನರು ಭಾವಿಸಿದ್ದಾರೆ.
$. ಸಿದ್ಧಾರೂಢರ ಜೀವನ ಚರಿತ್ರೆ :siddharoodha math history
ಇವರು ಚಿಕ್ಕವರಿದ್ದಾಗಲೇ ಅಧ್ಯಾತ್ಮ ವಿಜ್ಞಾನದ ಅಭಿರುಚಿಯನ್ನು ಹೊಂದಿದ್ದರು.
ಇವರು ಪ್ರವಚನ, ಪಾಠ, ಆಟಗಳನ್ನು ಕಲಿಯುತ್ತಿದ್ದರು. ಕುಲಗುರುಗಳಾದ ವೀರಭದ್ರ ಸ್ವಾಮಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಒಮ್ಮೆ ಭೂಮಿ ಪ್ರಳಯವಾಗುವುದು ಭೂಮಿಯ ಮೇಲಿನ ನೀರೆಲ್ಲಾ ಕರಗುವುದು ದೇವರು ಸ್ವರ್ಗವೆಲ್ಲ ನಾಶವಾಗುತ್ತದೆ ಎಂದು ಹೇಳಿದರು.
ಸಿದ್ದಾರೂಢರ ಆಧ್ಯಾತ್ಮಿಕ ಒಲವು ಹೆಚ್ಚಾಗಿ ಗುರುಗಳು ಹುಡುಕಾಟದಲ್ಲಿ ಊರು ಬಿಟ್ಟರು ದೂರದ ಶ್ರೀಶೈಲದಲ್ಲಿ ಶ್ರೀಗಜದಂಡಸ್ವಾಮಿಗಳು ಗುಡಿಗಂಟೆ ಎಂಬ ಸ್ಥಳದಲ್ಲಿ ತಂಗಿದ್ದಾರೆ ಎಂದು ತಿಳಿದರು. ಅಲ್ಲಿಗೆ ಹೋಗಿ ಆಶ್ರಮದಲ್ಲಿ ಕೆಲಸಕ್ಕೆ ಸೇರಿದರು. ನಂತರ ಗುರುಗಳು ಪರೀಕ್ಷೆಯನ್ನು ಮಾಡಿದರು, ಶಿಷ್ಯರಾಗಿ ಸ್ವೀಕರಿಸಿದರು ಸಿದ್ದರ ಭಾವ, ಭಕ್ತಿ, ಕಾಯಕ, ತಪಸ್ಸನ್ನು ಮೆಚ್ಚಿದ ಅವರು ಸ್ವಾಮಿಗಳನ್ನು ಆಶೀರ್ವದಿಸಿದರು. ಸಿದ್ಧರಿಗೆ ಅಲ್ಲಿ"ಆರೂಢ "ಎಂದರು ಅಲ್ಲಿಂದ ಸಿದ್ದಾರೂಢ ಎಂದು ಕರೆಯಲ್ಪಟ್ಟರು.
ಶ್ರೀಗಜದಂಡಸ್ವಾಮಿಗಳ ಆಶ್ರಮದಲ್ಲೇ ಲಿಂಗವನ್ನು ಬಿಚ್ಚಿಟ್ಟು ಆಶ್ರಮ ತೊರೆದರು ಅವರು "ಅದ್ವೈತ" ತತ್ವವನ್ನು ಸಾರಿದರು ಜಾತಿ-ಮತ-ಧರ್ಮಗಳು ಒಂದು ಎಂದರು.
ಒಮ್ಮೆ ವೈದಿಕ ರುಚಿಯಲ್ಲಿ ಭಾಷಣವನ್ನು ಮಾಡುತ್ತಿದ್ದ ಶಾಸ್ತ್ರಿಯನ್ನು ತಿದ್ದಿದರು . ಇವರು ೭ ದಿನ ಉಪನ್ಯಾಸ ನಡೆಸಿದರು ಅಲ್ಲಿಂದ ಜನರಿಗೆ ಇವರ್ಯಾರು ಎಂದು ಅರಿವಾಯಿತು. ಅನುಯಾಯಿಗಳು ಬಹಳಷ್ಟು ಜನ ಸಿಕ್ಕಿದರು,ಭಕ್ತರ ಬಳಗ ಸಮೂಹವೇ ಇವರನ್ನು ಮೆಚ್ಚಲಾರಂಭಿಸಿತು.
ಸಿದ್ದಾರೂಡರು ಪೂರ್ತಿ ಭಾರತವರ್ಷ(ದೇಶ )ವನ್ನೆಲ್ಲ ಸುತ್ತಿದ್ದಾರೆ.
ಇವರ ಪ್ರತಿ, ಜನರ ಭಕ್ತಿ ಎಂದರೆ. "ಸಿದ್ಧಾರೂಢರ ಜೋಳಗಿ ಜಗತ್ತಿಗೆಲ್ಲ ಹೋಳಿಗೆ" ಎಂಬ ಪ್ರಸಿದ್ಧಿಯು ಇದೆ. ಇವರು ಕೊನೆಗೆ ಹುಬ್ಬಳ್ಳಿಯಲ್ಲಿ ತಮ್ಮ ವೃದ್ಧಾಪ್ಯವನ್ನು ಕಳೆದರು ಇವರನ್ನು ಭೇಟಿಯಾಗಲು ದಿನಾಲು ಭಕ್ತರು ಬರುತ್ತಿದ್ದರು 1897 ರಿಂದ 1907ರಲ್ಲಿ ಶ್ರೀ ಸಿದ್ಧಾರೂಢರು ಸಿದ್ಧಾರೂಢ ಮಠವನ್ನು ನಿರ್ಮಿಸಿದ್ದಾರೆ.
1919 ರಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರವರು ಭೇಟಿ ನೀಡಿದ್ದಾರೆ.
1924 ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿನೀಡಿದ್ದಾರೆ.
ಇವರು ಶ್ರೀ ಕಲಾವತಿ ದೇವಿ ಹಿಂದೆ ರುಕ್ಮಾಬಾಯಿ ಮಲ್ಲಾಪುರ ಎಂದು ಕರೆಯುತ್ತಿದ್ದರು, ಗುರುನಾಥ ರೂಡ ಎಂಬ ಪ್ರಿಯ ಶಿಷ್ಯರಿದ್ದರು ಸಿದ್ದಾರೂಢರ ಪಕ್ಕದಲ್ಲಿ ಅವರ ಸಮಾಧಿ ಇದೆ. ಆಶ್ರಮದಲ್ಲಿ ಅಧ್ಯಯನ ಮಾಡಿದ ಸ್ವಾಮಿ ಮುಕ್ತಾನಂದ ಅವರಿಗೆ ಸನ್ಯಾಸವನ್ನು ನೀಡಿದರು. ಕಬೀರ್ ದಾಸ್ ಎಂಬ ಮುಸ್ಲಿಂ ಶಿಷ್ಯರನ್ನು ಹೊಂದಿದ್ದರು.
ಸಿದ್ದಾರೂಡರು 1929 ರಲ್ಲಿ ಲಿಂಗೈಕ್ಯರಾದರು, ಮೂರ್ತಿ ಅಮೃತಶಿಲೆಯ ಪ್ರತಿಮೆಯನ್ನು ಹೊಂದಿದೆ .
ಇಲ್ಲಿ ಪ್ರತಿವರ್ಷ ಶಿವರಾತ್ರಿ ಎಂದು ರಥಯಾತ್ರೆ ನಡೆಯುತ್ತದೆ ಲಕ್ಷಾಂತರ ಭಕ್ತರ ಸಮೂಹವೇ ಸೇರುತ್ತದೆ. ನೋಡಲು ಬಹಳ ಸುಂದರ ದೃಶ್ಯವಾಗಿರುತ್ತದೆ.
$. ಶ್ರೀ ಸಿದ್ಧರೋಡ ಮಠ ;siddharoodha math, hubli address
ನೀವು ಭೇಟಿ ನೀಡುವ ಒಳ್ಳೆಯ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು.
ದರ್ಶನ ಮುಂಜಾನೆ 6 ರಿಂದ ಸಾಯಂಕಾಲ 6:00 ವರೆಗೆ. siddharoodha math hubli timing
ಛಾಯಾಗ್ರಹಣ ಅನುಮತಿಯಿದೆ.
ಹುಬ್ಬಳ್ಳಿಯ ಶ್ರೀನಿವಾಸ ನಗರ ಪ್ರದೇಶದಲ್ಲಿ ಸಿದ್ಧಾರೂಢಮಠ ವಿದೆ.
ಹುಬ್ಬಳ್ಳಿ ಬಸ್ ಸ್ಟ್ಯಾಂಡ್ ಯಿಂದ ೨.೫ ಕಿಲೋಮೀಟರಯಿದೆ.
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ನಿಂದ ೪ ಕಿಲೋಮೀಟರ್ ದೂರದಲ್ಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ೫.೬ ಕಿಲೋಮೀಟರ್ ದೂರದಲ್ಲಿದೆ.
ಖಾಸಗಿ ವಾಹನಗಳ ವ್ಯವಸ್ಥೆಯನ್ನು ತುಂಬಾ ಇದೆ.
ದೂರವಾಣಿ ಸಂಖ್ಯೆ :+೯೧-೮೩೬-೨೨೦೩೪೮೫, ೨೨೦೨೬೫೧
ವಿಳಾಸ: ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಕಾರವಾರ ರಸ್ತೆ, ಹುಬ್ಬಳ್ಳಿ.
ಧಾರವಾಡ ಬಸ್ ಸ್ಟಾಂಡ ನಿಂದ ೨೯ ಕಿಲೋಮೀಟರಗಳ ದೂರದಲ್ಲಿದೆ.
ಬೆಳಗಾವಿಯಿಂದ ೧೦೧ ಕಿಲೋಮೀಟರ್ ದೂರದಲ್ಲಿದೆ.
ಬಾಗಲಕೋಟೆಯಿಂದಾ ೧೨೪ ಕಿಲೋಮೀಟರ್ ದೂರದಲ್ಲಿದೆ.
ವಿಜಯಪುರದಿಂದ ೨೦೦ ಕಿಲೋಮೀಟರ್ ದೂರದಲ್ಲಿದೆ.
ಬೆಂಗಳೂರುದಿಂದ ೪೧೦ ಕಿಲೋಮೀಟರ್ ದೂರದಲ್ಲಿದೆ.
ಕೋಲ್ಹಪುರದಿಂದ ೨೦೭ ಕಿಲೋಮೀಟರ್ ದೂರದಲ್ಲಿದೆ.
ಪುಣೆಯಿಂದ ೨೩೦ ಕಿಲೋಮೀಟರ್ ದೂರದಲ್ಲಿದೆ.
ಹೈದ್ರಾಬಾದನಿಂದ ೫೮೧ ಕಿಲೋಮೀಟರ್ ದೂರದಲ್ಲಿದೆ.
Location link: https://goo.gl/maps/BZghv7TkSrGCXt3R9
$. ಸಿದ್ಧಾರೂಢ ಮಠದ ಸಮೀಪದಲ್ಲಿರುವ ಆಕರ್ಷಣ ಸ್ಥಳಗಳು
ತ್ರಿಕೋಟೇಶ್ವರ ದೇವಸ್ಥಾನ
ನವಿಲುತೀರ್ಥ
ನೃಪತುಂಗ ಬೆಟ್ಟ
ಡಂಬಳ ಸೋಮೇಶ್ವರ
ಶ್ರೀ ತ್ರಿಲಿಂಗೇಶ್ವರ
ಹೊಸೂರು ಭವಾನಿ ಶಂಕರ್ ದೇವಸ್ಥಾನ
ಸಾತೋಡಿ ಮತ್ತು ಮಾಗೋಡು ಜಲಪಾತ ಮುಂತಾದವುಗಳು.
$. ಹುಬ್ಬಳ್ಳಿಯಲ್ಲಿ ವಸತಿಗಾಗಿ ನಿಮಗೆ ತಂಗಲು ಒಳ್ಳೆ ಒಳ್ಳೆ ಹೋಟೆಲಗಳು, ರೆಸಾರ್ಟ್ಗಳು ಬಾಡಿಗೆಯಿಂದ ಸಿಗುತ್ತವೆ.
ನಿಮಗೆ ಇಲ್ಲಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆ ಕೂಡ ಲಭ್ಯವಿದೆ.
Post a Comment