ಈ ಬ್ಲಾಗ್ ಅನ್ನು ಹುಡುಕಿ

Mysteries of Tirupati Venkateswara Temple

 -:Mysteries of Tirupati Venkateswara Temple:- 

ತಿರುಪತಿ ವೆಂಕಟೇಶ್ವರ ದೇವಸ್ಥಾನದ ರಹಸ್ಯಗಳು:
Mysteries at Tirupati Venkateswara Temple
 Mysteries at Tirupati Venkateswara Temple

 Mysteries of Tirupati Venkateswara Temple:ನಮಸ್ಕಾರ ಸ್ನೇಹಿತರೇ  ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ಅದು ತಮಿಳುನಾಡು ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಅದು ಆಂಧ್ರದಲ್ಲಿರುವ ತಿರುಪತಿಯ ತಿರುಮಲ ದೇವಸ್ಥಾನ.ಇದು ವಿಶ್ವದಲ್ಲಿಯೇ ಅತಿಹೆಚ್ಚು ದಾನದ ರೂಪದಲ್ಲಿ ದೇಣಿಗೆಯನ್ನು ಪಡೆಯುವ ದೇವಾಲಯವಾಗಿದೆ. ಚಿನ್ನ ಬೆಳ್ಳಿ ಆಭರಣಗಳು ಅವರವರ ಘನತೆಗೆ ತಕ್ಕಂತೆ ದೇಣಿಗೆ ನೀಡುವುದನ್ನು ನಾವು ವರದಿಗಳಲ್ಲಿ ಕೇಳಿರುತ್ತೇವೆ. ಭಕ್ತರ ಹಲವು ರೀತಿಯ ಬೇಡಿಕೆಗಳನ್ನು ಈಡೇರಿಸುವ Mysteries of Tirupati Venkateswara Temple(ತಿರುಪತಿ ವೆಂಕಟೇಶ್ವರ ದೇವಸ್ಥಾನದ ರಹಸ್ಯಗಳು)ನ್ನು  ನಮಗೆ ವಿಸ್ಮಯ ಎನಿಸುವ ಪ್ರಶ್ನೆಗಳು. 
Tirupati Venkateshwar
Mysteries at Tirupati Venkateswara Temple

 #ಬಾಲಾಜಿ ದೇವಸ್ಥಾನ ಹಿಂದೆ 12 ವರ್ಷಗಳ ಕಾಲ ಮುಚ್ಚಿತ್ತು ಅದು ಯಾವಾಗ   ಗೊತ್ತಾ?                       

#ಬಾಲಾಜಿಗೆ ಮೂಡಿಸುವ ಹೂವುಗಳು ಗರ್ಭಗುಡಿಯಿಂದ ಆಚೆಗೆ ಬರುವುದಿಲ್ಲ ಹಾಗಾದರೆ ಹೋಗುವುದು ಎಲ್ಲಿಗೆ ?                                                                           
#ತಿರುಪತಿ ಗರ್ಭಗುಡಿಯಲ್ಲಿ ಉರಿಯುತ್ತಿರುವ ದೀಪ ಸಾವಿರ ವರ್ಷಗಳಿಂದ ಉರಿಯುತ್ತಲೇ ಇದೆ ಹೌದಾ?                                                                                   
#ವೆಂಕಟೇಶ್ವರ ಸ್ವಾಮಿಯ ಕೂದಲುಗಳು ಹೇಗಿವೆ? 

ತಿರುಪತಿ ತಿಮ್ಮಪ್ಪನಿಗೆ ಸಂಬಂಧಿಸಿದ ಹಲವಾರು ನಿಗೂಡ ರಹಸ್ಯ ಗಳನ್ನು ನಾವು ಇಂದು ತಿಳಿದುಕೊಳ್ಳೋಣ. 

ಆದರೆ

 ನಾನು ಈಗ ಹೇಳೋಕೆ ಹೊರಟಿರುವುದು ನಿಮಗೆ ಗೊತ್ತಿರದೇ ಇರುವ ಹಲವಾರು ವಿಷಯಗಳನ್ನು.  

@ತಿರುಪತಿ ತಿಮ್ಮಪ್ಪನ ದೇವಸ್ಥಾನದ ಪ್ರಧಾನ ಬಾಗಿಲಿನ ಬದಿಯಲ್ಲಿ ಒಂದು ಬೆತ್ತ ವಿದೆ. ಈ ಬೆತ್ತವನ್ನು ಶಿಕ್ಷಕ ಅನಂತವಲ್ಲ ಅವರು ವೆಂಕಟೇಶ್ವರ ಸ್ವಾಮಿ ಬಾಲಕನಾಗಿದ್ದಾಗ ಹೊಡೆಯಲು ಉಪಯೋಗಿಸುತ್ತಿದ್ದರೆಂದು ನಂಬಲಾಗಿದೆ. ಗುರುಗಳು ಅನಂತವಲ್ಲರವರು ಬಾಲಕ ವೆಂಕಟೇಶ್ವರನಿಗೆ ಒಮ್ಮೆ ಹೊಡೆಯುವಾಗ ಗಲ್ಲಕೆ ತಾಗಿ ಅದು ಗಾಯವನ್ನುಂಟು ಮಾಡುತ್ತದೆ. ಆಗ, ಬಾಲಕ ಬಾಲಾಜಿಯ ಕೆನ್ನೆಗೆ ಗಂಧಕ ಲೇಪನವನ್ನು ಹಚ್ಚಿದರಂತೆ ಅದು ಇಂದಿಗೂ ಬಾಲಾಜಿಯ ಕೆನ್ನೆಗೆ ಗಂಧಕ ಲೇಪನವನ್ನು ಮಾಡುವ ಪ್ರತೀತಿ ಜಾರಿಯಲ್ಲಿದೆ.  

@ವೆಂಕಟೇಶ್ವರಸ್ವಾಮಿಯ ತಲೆಯ ಕೂದಲು ನಿಜವಾದ ತಲೆಯ ಕೂದಲಿನಂತೆ ಇದೆ. ಇದು ಎಂದಿಗೂ! ಕೂದಲುಗಳು ಸಿಕ್ಕಿಕೊಳ್ಳದೇ ರೇಷ್ಮೆಯಂತೆ ನುಣುಪಾಗಿರುವಂತೆ ಇಂದಿಗೂ ಇದು ವಿಸ್ಮಯಕಾರಿಯಾಗಿದೆ.  

@ತಿರುಪತಿ ಸ್ವಾಮಿಗೆ ಸಮೀಪದಲ್ಲಿರುವ ಒಂದು ಗ್ರಾಮದಿಂದಲೇ ಮಾತ್ರ ವೆಂಕಟೇಶ್ವರ ಸ್ವಾಮಿಗೆ ನೈವೇದ್ಯ ಸಾಮಗ್ರಿಗಳು ನೈವೇದ್ಯವಾಗಿ ಬಳಸಲು ಅರ್ಪಿಸಲಾಗುವುದು. ಹೂವು ಹಣ್ಣು ತುಪ್ಪ ಇವುಗಳನ್ನು ತಿರುಮಲದಿಂದ 23 ಕಿಲೋಮೀಟರ್ ದೂರದಿಂದ ತರಿಸಲಾಗುತ್ತದೆ. ಈ ಗ್ರಾಮದ ಹೆಸರನ್ನು ಇಂದಿಗೂ ಗುಪ್ತವಾಗಿಯೇ ಇಡಲಾಗಿದೆ. ಈ ಗ್ರಾಮದಿಂದಲೇ ಶತಮಾನಗಳಿಂದ ನೈವೇದ್ಯಗಳು ವೆಂಕಟೇಶ್ವರನಿಗೆ ನೀಡಲಾಗುತ್ತಿದೆ. ಈ ಗ್ರಾಮದಿಂದ ಉಪಯೋಗಿಸುವ ಸಾಮಗ್ರಿಗಳನ್ನು ಬಿಟ್ಟರೆ ಬೇರೆ ಯಾವ ಮನೆಯಿಂದ ಸಾಮಗ್ರಿಗಳನ್ನು ಉಪಯೋಗಿಸುವುದಿಲ್ಲ.  

ವಿಶೇಷ ಏನೆಂದರೆ ಆ ಗ್ರಾಮದಲ್ಲಿ ಗ್ರಾಮದ ನಿವಾಸಿಗಳನ್ನು ಬಿಟ್ಟರೆ ಬೇರೆ ಯಾವ ವ್ಯಕ್ತಿಗಳಿಗೂ ಅಲ್ಲಿ ಪ್ರವೇಶವಿಲ್ಲ.ಆ ಗ್ರಾಮದಲ್ಲಿ ಆ ಕಾಲದ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಇಲ್ಲಿಯವರೆಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಒಂದು ವಿಶೇಷವೇನೆಂದರೆ ಗ್ರಾಮದ ವ್ಯಕ್ತಿಗಳು ಸೊಂಟದಿಂದ ಮೇಲೆ ವಸ್ತ್ರಗಳನ್ನು ಧರಿಸುವುದಿಲ್ಲ.  

@ಸಾಮಾನ್ಯವಾಗಿ ನೋಡಿದರೆ ವಿಗ್ರಹಗಳು ಗರ್ಭಗುಡಿಯ ಮಧ್ಯಭಾಗದಲ್ಲಿ ಕಂಡುಬರುತ್ತವೆ. ಆದರೆ ತಿರುಪತಿ ಬಾಲಾಜಿಯ ವಿಗ್ರಹ ಗರ್ಭಗುಡಿಯ ಬಲಭಾಗದ ಕಡೆ ಗೋಚರಿಸುತ್ತದೆ. ಇದನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಪ್ರತಿದಿನವೂ ಹೊಸ ಧೋತಿ ಸೊಂಟದಿಂದ ಕೆಳಗೆ ಮತ್ತು ಸೀರೆಯನ್ನು ಎದೆಯ ಭಾಗಕ್ಕೆ ಅಲಂಕರಿಸಲಾಗುತ್ತದೆ.ತೊಡಿಸಿದ ಉಡುಪುಗಳನ್ನು ಅಂದರೆ ನಿನ್ನೆಯ ಉಡುಪುಗಳನ್ನು ವಿಶೇಷ ಪೂಜೆ ಮಾಡಿವ ದಂಪತಿಗಳಿಗೆ ಆಶೀರ್ವಾದದ ರೂಪದಲ್ಲಿ ಶಕ್ತಿ ಎಂದು ತಿಳಿದು ನೀಡಲಾಗುತ್ತದೆ. ಇದರಿಂದ ದಾಂಪತ್ಯ ಜೀವನವು ಸಾವಿನವರೆಗೆ ಸುಖಕರವಾಗಿರುವ ನಂಬಿಕೆ ಇದೆ. 

Tirupati Venkateshwara Temple
Tirupati Venkateshwara Temple

ದೇವಸ್ಥಾನದ ವಿಗ್ರಹಕ್ಕೆ ಬಳಸುವ ಹೂವುಗಳನ್ನು ಅಲ್ಲಿಂದ ಹೊರಗಡೆ ತರುವ ಮಾತೇ ಇಲ್ಲ. ಏಕೆಂದರೆ ಗರ್ಭಗುಡಿಯ ಹಿಂಭಾಗದಲ್ಲಿ ಒಂದು ಚಿಕ್ಕ ಜಲಪಾತವಿದ್ದು, ಅದು ಕೆಳಕ್ಕೆ ಧಾವಿಸುತ್ತದೆ ಎಲ್ಲಾ ವಸ್ತುಗಳನ್ನು ಅಲ್ಲಿಂದ ವಿಸರ್ಜಿಸಲಾಗುತ್ತದೆ.ಶರೀರವನ್ನು ಆತ್ಮ ತೊರೆದ ಮೇಲೆ ಹಿಂದೆ ನೋಡದಿರುವ ಆಚರಣೆಯಾಗಿದೆ. ಇದೇ ರೀತಿ ಸ್ವಾಮಿಗೆ ಉಪಯೋಗಿಸಿದ ಹೂವುಗಳನ್ನು ಸ್ವಾಮಿಯ ಹಿಂಭಾಗದಲ್ಲಿರುವ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಪೂಜಾರಿಗಳು ದಿನವಿಡೀ ದೇವರ ಹಿಂಭಾಗದ ವಿಗ್ರಹವನ್ನು ನೋಡುವ ಹಾಗಿಲ್ಲ. ಇಲ್ಲಿಂದ ವಿಸರ್ಜಿಸಲ್ಪಟ್ಟ ಹೂವುಗಳು ಗೋಚರಿಸುವುದು 20 ಕಿಲೋಮೀಟರ್ ದೂರದಲ್ಲಿರುವ ವೇರ್ ಪಡೋ ಎಂಬ ಸ್ಥಳದಲ್ಲಿ. ಈ ಸ್ಥಳ ತಿರುಪತಿಯಿಂದ ಕಾಳಹಸ್ತಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಇವುಗಳಿಗಾಗಿ ಭಕ್ತರು ಇಲ್ಲಿ ಕೂಡ ಕಾಯುತ್ತಿರುತ್ತಾರೆ.  

@ಬಾಲಾಜಿಯ ವಿಗ್ರಹವನ್ನು ಎಷ್ಟು ಸ್ವಚ್ಛಗೊಳಿಸಿದರು ಎಷ್ಟು ವರಿಸಿದರು ಬೆನ್ನಿನ ಭಾಗ ಸದಾ ತೆವವಾಗಿರುತ್ತದೆ. ಇದು ಒಂದು ವಿಸ್ಮಯ ವಾಗಿದೆ. ಒಂದು ವೇಳೆ ನೀವು ಬೆನ್ನಿನ ಭಾಗಕ್ಕೆ ಕಿವಿಕೊಟ್ಟು ಆಲಿಸಿದರೆ ಸಮುದ್ರದ ಅಲೆಗಳ ಶಬ್ದವನ್ನು ಕೇಳಿಸುತ್ತದೆ.

@ ಪ್ರತಿ ಗುರುವಾರ ನಡೆಯುವ ನಿಜ ದರ್ಶನಂ ಕಾರ್ಯಕ್ರಮದಲ್ಲಿ, ಸ್ವಾಮಿಯ ವಿಗ್ರಹವನ್ನು ಮರದ ಕೊರಡಿಂದ ತೇದ ಲೇಪನದಿಂದ ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ನಂತರ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಿದಾಗ, ಒಳಭಾಗದಲ್ಲಿ ಲಕ್ಷ್ಮೀದೇವಿಯ ಬಿಂಬವು ಚಿತ್ರರೂಪದಲ್ಲಿ ಗೋಚರಿಸುತ್ತದೆ.  ಈ ಚಿತ್ರವನ್ನು ದೇವಾಲಯದ ಅಧಿಕಾರಿಗಳು ಮಾರಾಟ ಮಾಡುತ್ತಾರೆ.  

@ಬಾಲಾಜಿ ವೆಂಕಟೇಶ್ವರನ ಮುಂದೆ ಉರಿಯುತ್ತಿರುವ ದೀಪ ಸಾವಿರಾರು ವರ್ಷಗಳಿಂದ ಉರಿಯುತ್ತಲೇ ಇದೆ. ಇದು ಆರಿದ್ದನ್ನು ಯಾರು ಕಂಡೇ ಇಲ್ಲ. ಅಷ್ಟೇ ಅಲ್ಲ ಈ ದೀಪವನ್ನು ಯಾವಾಗ ಬೆಳಗಿಸಲಾಯಿತು ಎಂದು ಇನ್ನೂ ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. 

@ತಿರುಪತಿ ಬಾಲಾಜಿಯ ದೇವಸ್ಥಾನ ಇಂದಿಗೂ ಒಂದು ಕ್ಷಣದವರೆಗೆ ಮುಚ್ಚದೆ ಇದ್ದರೂ ೧೮೦೦ ರಲ್ಲಿ  12ವರ್ಷಗಳ ಕಾಲ ತಿರುಪತಿ ಬಾಲಾಜಿಯ ದೇವಸ್ಥಾನ ಮುಚ್ಚಿತ್ತು.  

Shree Venkateshwara
Tirupati Balaji 

@ಯಾವುದೇ ವಸ್ತುವಿನ ಮೇಲೆ ಬಿಸಿ ಅಥವಾ ತನ್ನಗೆ ದ್ರವ ಬಿದ್ದಮೇಲೆ ಆ ವಸ್ತುವಿನ ತಾಪಮಾನದಲ್ಲಿ ಬದಲಾವಣೆ ಆಗುತ್ತದೆ. ಆದರೆ ಸ್ವಾಮಿಯ ದಿನ ಬೆಳಿಗ್ಗೆ  ನಾಲ್ಕೂವರೆಗೆ ಆಗುವ ದೇವರ ಹಾಲಿನ ಮತ್ತು ನೀರಿನ ರೂಪದ ಸ್ನಾನದಲ್ಲಿ ವಿಗ್ರಹದ ತಾಪಮಾನವು 110 ಡಿಗ್ರಿ ಫ್ಯಾರನ್ಹೀಟ್ ತಾಪಮಾನವನ್ನು ನೀರು ಬಿಸಿ ಇರಲ್ಲಿ ತಣ್ಣಗಿರಲಿ ವಿಗ್ರಹ  ತಾಪಮಾನವನ್ನು ಕಾಯ್ದುಕೊಂಡಿರುತ್ತಾರೆ. ಈ ವಿಗ್ರಹದ ಮೇಲೆ ನವಿರಾದ ಬೆವರ ಹನಿಗಳಂತೆ ನೀರು ಪ್ರತಿಬಿಂಬವಾಗುತ್ತದೆ. ಅದನ್ನು ಪೂಜಾರಿಗಳು ಪ್ರತಿದಿನವೂ ವರಿಸಿ ಸ್ವಚ್ಛಗೊಳಿಸುತ್ತಾರೆ.   

ಸ್ನೇಹಿತರೆ ಇಂಥ ಹಲವಾರು ವಿಸ್ಮಯಗಳು ನೂರಾರು ಇವೆ ಈ ದೇವಸ್ಥಾನದ ಬಗ್ಗೆ ಇವು ಜನರ ಪ್ರಮುಖ ಪ್ರಶ್ನೆಯಾಗಿದ್ದವು.   

 

ಕಾಮೆಂಟ್‌ಗಳಿಲ್ಲ

Top 5 Places to Visit Weather Temperature in Ooty Tamil Nadu

Top 5 Places to Visit Weather Temperature in Ooty Tamil Nadu  ಪ್ರಕೃತಿಯ ಸುಂದರ ನೀಲಗಿರಿ ಪರ್ವತ ಶ್ರೇಣಿಯ ಉಪಸ್ಥಿತಿಯ  ಮನಮೋಹಕ  ಪರಿಸರದ ಪ್ರಮುಖ ವೀಕ್ಷಣೆಯ...

Blogger ನಿಂದ ಸಾಮರ್ಥ್ಯಹೊಂದಿದೆ.