Murdeshwar Temple History Height Time To Visit Famous Places Beach Gokarna Distance And Useful Tour Information Images in Kannada
ಮುರ್ಡೇಶ್ವರ ಉತ್ತರಕನ್ನಡ ಜಿಲ್ಲೆ ಮುರ್ಡೇಶ್ವರದಲ್ಲಿ ಸುಂದರವಾಗಿ ಮನೋಲ್ಲಾಸವಾಗುವ ರೀತಿಯಲ್ಲಿ ಹಾಗೂ ಮನಃಶಾಂತಿ ಹೊಂದುವಂತೆ ಅನ್ನಿಸುವ ಈ ಸ್ಥಳವು ಬಹಳ ಸುಪ್ರಸಿದ್ಧ ಜನಪ್ರಿಯವಾದ ಸುಂದರ ಸ್ಥಳವಾಗಿದೆ.
ಮುರುಡೇಶ್ವರನ ಬಗ್ಗೆ:
ಮುರುಡೇಶ್ವರನ ಬಗ್ಗೆ ಒಂದು ಕಥೆ ಇದೆ. ಇದು ರಾಮಾಯಣ ಕಾಲದ್ದು ಶಿವನ ಪ್ರಾರ್ಥನೆಗಾಗಿ ರಾವಣನನು ಘೋರ ತಪಸ್ಸು ಮಾಡಿ, ಶಿವನ ಒಲುಮೆಗೆ ಪಾತ್ರನಾದನು. ರಾವಣ ಭಕ್ತಿಗೆ ಮೆಚ್ಚಿ ಶಿವನು ರಾವಣನಿಗೆ ವರ ಪಡೆಯುವಂತೆ ಕೇಳಿದಾಗ ರಾವಣ ಶಿವನ ಆತ್ಮಲಿಂಗವನ್ನು ಕೇಳಿದನಂತೆ, ಆದರೆ ಶಿವನು ಒಂದು ಶರತ್ತು ಹಾಕಿ ಆತ್ಮಲಿಂಗವನ್ನು ಭೂಮಿಗೆ ಸ್ಪರ್ಶಮಾಡದೆ ತೆಗೆದುಕೊಂಡು ಹೋಗಬೇಕು ಎಂದನಂತೆ. ಇಲ್ಲವಾದರೆ ಅದು ಚಲಿಸಲಾರದು ಎಂದು ಹೇಳಿದನಂತೆ. ರಾವಣನು ಆತ್ಮಲಿಂಗವನ್ನು ಪಡೆದು ಲಂಕಾದ ಕಡೆಗೆ ಪ್ರಯಾಣ ಬೆಳೆಸಿದನು. ವಿಷ್ಣು ರಾವಣನು ಅಮರನಾದರೆ ಭೂಮಿಗೆ ವಿನಾಶ ತರಬಹುದೆಂದು ಯೋಚಿಸಿ ಒಂದು ಷಡಿಯಂತ್ರವನ್ನು ಗಣೇಶನ ಜೊತೆಗೂಡಿ ಹೂಡುತ್ತಾನೆ .
ಗಣೇಶನಿಗೆ ರಾವಣನು ಬಹಳ ಶ್ರದ್ಧಾಳು ಪ್ರಾರ್ಥನಾಕಾರ ಎಂದು ತಿಳಿದಿತ್ತು. ಗೋಕರ್ಣ ಸಮೀಪಿಸುತ್ತಿದ್ದಂತೆ ಸಂಜೆಯಾದಂತೆ ವಿಷ್ಣು ಸೂರ್ಯನನ್ನು ಮರೆಮಾಚಿದನು. ಈಗ ರಾವಣನು ತನ್ನ ಸಾಯಂಕಾಲದ ಆಚರಣೆಗಳನ್ನು ಮಾಡಬೇಕಾಗಿತ್ತು, ಆದರೆ ಅವನ ಕೈಯಲ್ಲಿ ಆತ್ಮಲಿಂಗ ಇರುವುದರಿಂದ ಇದು ಅಸಾಧ್ಯವಾಗಿತ್ತು. ಅದೇವೇಳೆಗೆ ಬ್ರಾಹ್ಮಣ ವೇಷದಲ್ಲಿ ಗಣೇಶನು ಬಂದನು, ರಾವಣನು ಆತ್ಮಲಿಂಗವನ್ನು ಅವನ ಕೈಗೆ ಕೊಟ್ಟು ಆಚರಣೆಗಳನ್ನು ಮುಗಿಸಬೇಕೆಂದು ಯೋಚಿಸಿ, ಬ್ರಾಹ್ಮಣ ಬಾಲಕನಿಗೆ ಆತ್ಮಲಿಂಗವನ್ನು ಕೈಯಲ್ಲಿ ಹಿಡಿದುಕೋ ನೆಲದ ಮೇಲೆ ಇಡಬೇಡ ಎಂದು ಕೇಳಿಕೊಂಡನು.
ಆಗ ಬ್ರಾಹ್ಮಣ ಬಾಲಕ ಮೂರು ಬಾರಿ ಕರೆಯುವುದಾಗಿ ಅಷ್ಟರೊಳಗೆ ಹಿಂತಿರುಗದಿದ್ದರೆ ಆತ್ಮಲಿಂಗವನ್ನು ನೆಲದ ಮೇಲೆ ಇಡುವುದಾಗಿಯೂ ಒಪ್ಪಂದ ಮಾಡಿಕೊಂಡನು. ಇವಾಗ ಬ್ರಾಹ್ಮಣ ಬಾಲಕ ತನ್ನ ಎಲ್ಲಾ ಒಪ್ಪಂದಗಳನ್ನು ಪೂರ್ಣಗೊಳಿಸಿ, ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟನು. ವಿಷ್ಣು ಸೂರ್ಯನ ಮರೆಮಾಚುವಿಕೆ ತೆಗೆದು ಹಗಲು ಹೊತ್ತಾದಂತೆ ಗೋಚರಿಸಿದನು. ರಾವಣನು ತಾನು ಮೋಸ ಹೋಗಿರುವುದಾಗಿ ಅರಿತು, ಲಿಂಗವನ್ನು ನಾಶಮಾಡಲು ಹೊರಟನು.
ರಾವಣನ ಶಕ್ತಿಯಿಂದ ಕೇವಲ ಒಂದು ಲಿಂಗದ ತಲೆಯಿಂದ ಬಂದ ತುಣುಕು ಇಂದಿನ ಸುರತ್ಕಲ್ ನಲ್ಲಿ ಬಿದ್ದಿದೆ ಇಗ ಪ್ರಸಿದ್ಧ ಸದಾಶಿವನ ದೇವಾಲಯವಾಗಿದೆ.
ಎರಡನೇ ಆತ್ಮಲಿಂಗದ ಹೊದಿಕೆಯನ್ನು ನಾಶ ಮಾಡಲು ನಿರ್ಧರಿಸಿ 37 ಕಿಲೋಮೀಟರು ದೂರ ಸಜ್ಜೇಶ್ವರ ಎಂಬ ಸ್ಥಳಕ್ಕೆ ಎಸೆದನು.
ಮೂರನೆಯದು ಗುಣೇಶ್ವರ ಮತ್ತು ದಾರೆಶ್ವರ (ಈಗ ಗುಣವಂತೆ) ಎಂಬ ಸ್ಥಳಕ್ಕೆ,ಎಸೆದಿದ್ದಾರೆ.
ಕೊನೆಗೆ ಆತ್ಮಲಿಂಗವನ್ನು ಮುಚ್ಚುವ ಬಟ್ಟೆಯನ್ನು ಕಂದಕಗಿರಿ (ಕುಂದಕ ಬೆಟ್ಟ) ಇಲ್ಲಿ ಇರುವ 'ಮುರುದೇಶ್ವರ' ಎಂಬ ಸ್ಥಳಕ್ಕೆ ಎಸೆದರು.ಮುರುದೇಶ್ವರವನ್ನು "ಮುರುಡೇಶ್ವರ"ಎಂದು ಮರುನಾಮಕರಣ ಮಾಡಲಾಗಿದೆ .
ಮುರುಡೇಶ್ವರ ದೇವಾಲಯವನ್ನು ಕುಂದಕ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಇಲ್ಲಿ 123 ಅಡಿ ಶಿವನ ವಿಗ್ರಹವನ್ನು ನಿರ್ಮಿಸಲಾಗಿದೆ. 2008ರಲ್ಲಿ ದೇವಾಲಯದ 20 ಅಂತಸ್ತಿನ ರಾಜಗೋಪುರವನ್ನು ಮತ್ತು ಅದರಲ್ಲಿ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.
ಬೃಹತ್ ವಿಗ್ರಹ ವೀಕ್ಷಣೆಗೆ ಇದನ್ನು 209 ಅಡಿ ಎತ್ತರ ನಿರ್ಮಿಸಲಾಗಿದೆ. ಬೆಟ್ಟದ ಕೆಳಭಾಗದಲ್ಲಿ ರಾಮಲಿಂಗೇಶ್ವರ ಲಿಂಗವೂ ಇದೆ. ಇಲ್ಲಿ ಭಕ್ತರು ಸ್ವಯಂ ಸೇವೆ ಸಲ್ಲಿಸುತ್ತಾರೆ. ಶ್ರೀ ಅಕ್ಷಯ ಗುಣ ವಿಗ್ರಹದ ಪಕ್ಕದಲ್ಲಿ ಶನೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ಎರಡು ಗಾತ್ರದ ಆನೆಗಳು ಅದಕ್ಕೆ ಹೋಗುವ ದಾರಿಯಲ್ಲಿ ಕಾವಳಿಗೆ ನಿಂತಿವೇ. ಉದ್ಯಾನವನವಿದೆ, ಬದಿಯಲ್ಲಿ ಸೂರ್ಯರಥದ ಪ್ರತಿಮೆಗಳು ಅರ್ಜುನನಿಗೆ ಶ್ರೀಕೃಷ್ಣನು ಗೀತೋಪದೇಶವನ್ನು ನೀಡುತ್ತಿರುವುದು, ರಾವಣನು ಮಾರುವೇಷದಲ್ಲಿ ಗಣೇಶನಿಂದ ವಂಚನೆಗೆ ಒಳಗಾಗಿರುವುದು, ಮುಖ್ಯ ದೇವರು ಮುರುದೇಶ್ವರ ಲಿಂಗ ಇದನ್ನು ಈಗ ಮುರುಡೇಶ್ವರ ಎಂದು ಕರೆಯುತ್ತಾರೆ. ಲಿಂಗವು ಮೂಲ ಆತ್ಮಲಿಂಗದ ತುಂಡು ಎಂದು ನಂಬಲಾಗಿದೆ. ಭಕ್ತರು ಹೊಸ್ತಿಲಲ್ಲಿ ನಿಂತು ಗರ್ಭಗುಡಿ ದೇವರನ್ನು ವೀಕ್ಷಿಸಬಹುದು. ಲಿಂಗವು ಒರಟು ಬಂಡೆಯಂತಿದೆ.
ಇದು ವಿಶ್ವದ ಎರಡನೇ ಅತಿ ಎತ್ತರ ಶಿವನ ಪ್ರತಿಮೆಯಾಗಿದೆ. ಮೂರು ಕಡೆಗೆ ಮಿನುಗುವ ಅರಬ್ಬಿ ಸಮುದ್ರ ಮತ್ತು ನೇತ್ರಾಣಿ ದ್ವೀಪದ ಸುತ್ತಲಿನ ಕಡಲತೀರಗಳು, ಸಾಹಸ ಚಟುವಟಿಕೆಗಳು, ಪ್ರವಾಸಿಗರಿಗೆ ಗಮನಹಾರ ಆಕರ್ಷಣೆ ಸ್ಥಳವಾಗಿದೆ. ಇಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಮಾಡುತ್ತಾರೆ.
ಈ ದೇವಾಲಯವು ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲೂಕಿನಲ್ಲಿ ದ್ರಾವಿಡ್ ವಾಸ್ತುಶೈಲಿಯಲ್ಲಿ, ಅದ್ಭುತವಾದ ಶಿವನ ಪ್ರತಿಮೆ ಹಾಗೂ ಚಾಲುಕ್ಯ ಮತ್ತು ಕದಂಬ ಶಿಲ್ಪಗಳು ಹೊಂದಿರುವ, ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.
$ಮುರುಡೇಶ್ವರದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು:
@ಮಿರ್ಜಾನ್ ಫೋರ್ಟ್; ದ ಹಿಸ್ಟಾರಿಕ್ ಮಾರ್ವೆಲ್: ಈ ಕೋಟೆಯು ರಾಣಿ ಚೆನ್ನಬರದೇವಿ ಕ್ರಿಸ್ತಶಕ 1608 ರಿಂದ 1640ರಲ್ಲಿ ನಿರ್ಮಿಸಿದರು ಎನ್ನುತ್ತಾರೆ.
ಇದು 16-17 ನೇ ಶತಮಾನದಲ್ಲಿ ಹೋರಾಡಿದ ಭೂಮಿಯಾಗಿದೆ. ಇದನ್ನು ನಂತರ ಬ್ರಿಟಿಷರ ವಷವಾಗಿ ಅವರ ಶಸ್ತ್ರಾಸ್ತ್ರ ಬಂಢಾರವಾಯಿತು. ಈಗ ಇದನ್ನು ಭಾರತ ಸರ್ವೇಕ್ಷಣ ಇಲಾಖೆಯ ಸ್ಮಾರಕವೆಂದು ಘೋಷಣೆಯಾಗಿದೆ. ಮಿರ್ಜಾ ಪೋರ್ಟ್ ೪ ಹೆಕ್ಟರ ಭೂ ಪ್ರದೇಶವಾಗಿದೆ. ಇಲ್ಲಿನೀವು ಸುತ್ತಾಡಬಹುದಾದಂತ ಸ್ಥಳಗಳು, ಓಂ ಬೀಚಿಗೆ ಭೇಟಿನೀಡಿ, ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಧ ಚಂದ್ರನ ಬಿಚಿಗೆ ಭೇಟಿ ನೀಡಿ, ಪ್ರವೇಶ ಶುಲ್ಕ ಇಲ್ಲ.
@ನೇತ್ರಾಣಿ ದ್ವೀಪ; ದ ಎಸ್ಕೇಪ್ ಫ್ರಮ್ ಕ್ರೌಡ್: ಈ ದ್ವೀಪವು ಹವಳದಂತೆ ಕಂಗೊಳಿಸುತ್ತಾ, ಅರಬಿಸಮುದ್ರ ನೀರಿನಿಂದ ಆವರಿಸಲ್ಪಟ್ಟಿದೆ. ಹೃದಯ ಆಕಾರದ್ದಾಗಿದೆ.ಸ್ಕೊಬಾ ಡೈವಿಂಗ್ ಮತ್ತು ಸ್ನಾಕಿಂಗ ಮಾಡಲು ಒನ್ ಆಫ್ ದ ಬೆಸ್ಟ್ ಅಂತಾನೆ ಹೇಳಬಹುದು. ಇಲ್ಲಿ ಚಿಟ್ಟೆ ಮೀನುಗಳು, ಗಿಳಿಮೀನುಗಳು, ಹವಳ ಪ್ರಚೋದಕ ಮೀನುಗಳು, ಸಿಗಡಿ ಮೀನುಗಳು,ಓರ್ಕಾಸ್ ಲ್ಯಾಂಡ್ ವೆಲ್ ಸಾರ್ಕಗಳ ದೃಶ್ಯಗಳು ಇಲ್ಲಿ ಕಾಣಬಹುದು.
@ ಮುರುಡೇಶ್ವರ ಬೀಚ್; ದ ಟ್ರ್ಯಾಂಕ್ವಿಲ್ ವೈಬೆ: ಮುರುಡೇಶ್ವರ ಪ್ರಶಾಂತವಾದ ಅರಬಿ ಸಮುದ್ರದ ನೀಲಿ ನೀರನ್ನು ಮತ್ತು ಬೆಟ್ಟಗಳು ಪರ್ವತಗಳಿಂದ ಆವರಿಸಿದೆ. ತೆಂಗಿನಮರಗಳು ಪ್ರವಾಸಿಗರ ಕಡಲತೀರದ ತುಂಬಾ ಹರಡಿರುವುದು ಇಲ್ಲಿನ ಪಾಕ ಪಕ್ವಗಳನ್ನೂ ತಿಂದು ಸಂತೋಷಪಡಬಹುದು.
@ಅಪ್ಸರಕೊಂಡ ಜಲಪಾತ; ಮಾಂತ್ರಿಕ ಆಕರ್ಷಣೆ: ಇಲ್ಲಿ ಪ್ರವಾಸಿಗರು ಭೇಟಿ ನೀಡುವ ಸುಂದರ ಸ್ಥಳ ಎಲ್ಲಾ ಕಡೆಗೆ ಹಸಿರೋ ಹಸಿರು ಮುರುಡೇಶ್ವರ ದಿಂದ 20 ಕಿಲೋಮೀಟರ್ ದೂರದಲ್ಲಿ ಸ್ವಚ್ಛ-ಸುಂದರ ಗಣನೀಯ ಎತ್ತರದಿಂದ ಧುಮುಕುವ ನೀರು ಇಲ್ಲಿ ಪ್ರವಾಸಿಗರನ್ನು ನೋಡಲು ಕೈಬೀಸಿ ಕರೆಯುತ್ತದೆ. ಹೋಗುವುದು ಹೇಗೆ ಅಪ್ಸರಕೊಂಡ ರಸ್ತೆ ಅಪ್ಸರಕೊಂಡ ಕರ್ನಾಟಕ.
@ಮುರುಡೇಶ್ವರ ಮಾರುಕಟ್ಟೆ;ಶಾಪ್ಪಾ ಹೋಲಿಕರ ಸ್ವರ್ಗ: ನೀವು ಮುಡೇಶ್ವರದಲ್ಲಿ ವಿಗ್ರಹ, ಸ್ಮಾರಕಗಳು, ಕರಕುಶಲ ವಸ್ತುಗಳು, ಆಭರಣ ಪಟ್ಟಿಗೆಗಳು, ಅಲಂಕಾರ ವಸ್ತುಗಳು, ಗೋಡೆಯ ಹ್ಯಾಂಗಿಂಗ್ ಎಲ್ಲ ತರಹದ ಸಾಮಾನುಗಳು, ನಿಮಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಸಿಗುತ್ತವೆ. ಇಲ್ಲಿ ತುಂಬಾ ಅಂಗಡಿಗಳಿವೆ ನೀವು ಡಾಲರ್ ರೂಪದಲ್ಲಿ ಹಾಗೂ ಭಾರತೀಯ ರೂಪಾಯಿ ರೂಪದಲ್ಲಿ ಯಾವುದೇ ರೀತಿಯ ಕರೆನ್ಸಿಗಳನ್ನು ನೀವು ಇಲ್ಲಿ ಪೇ ಮಾಡಿ ನೀವು ವ್ಯವಹಾರ ವಿನಿಮಯವನ್ನು ಮಾಡಿಕೊಳ್ಳಬಹುದು.
@ಮುರುಡೇಶ್ವರ ಕೋಟೆ; ವಾಸ್ತುಶಿಲ್ಪದ ಅದ್ಭುತ ರಚನೆ: ವಿಜಯನಗರ ಕಾಲದ ಪ್ರಭಲ ಕೋಟೆ ಎಂದು ನಂಬಲಾಗಿದೆ. ಈಗಲೂ ಗತಕಾಲದ ವೈಭವವನ್ನು ಪ್ರತಿಬಿಂಬಿಸುತ್ತದೆ. ಇದು ವಿಜಯನಗರ ಅರಸರಿಂದ ನಿರ್ಮಾಣ ಹಾಗೂ ಟಿಪ್ಪು ಸುಲ್ತಾನನಿಂದ ನವೀಕರಿಸಲಾಗಿದೆ. ಅಲ್ಲೇ ಮುರುಡೇಶ್ವರದ ಹಿಂದೆ ಇದೆ, ಆಟೋದಿಂದ ತಲುಪಬಹುದು.
@ಜಲಿ ಬೀಚ್; ಶಾಂತತೆಯನ್ನು ನೀಡುತ್ತದೆ: ಇದು ಜಾಲಿ ಕೋಡಿ ರಸ್ತೆ ಜಾಲಿ ಕೋಡಿಯಲ್ಲಿ ಕಂಡುಬರುವ ಶಾಂತ ಭೂಮಿ ನಿಮಗಿಲ್ಲಿ ತಂಗಿನಮರ ಪ್ರಾಚೀನ ಕಾಲಕ್ಕೆ ಕರೆದುಕೊಂಡು ಹೋಗುವ ಕಡಲತೀರ ಹಸಿರು ಗಿಡಗಳು, ಮೀನುಗಾರಿಕೆ ನೀವು ಇಲ್ಲಿ ಆರಾಮಾಗಿ ಭೇಟಿ ನೀಡಬಹುದು.
@ಬಸವರಾಜ ದುರ್ಗ ಕೋಟೆ; ಸುಂದರವಾದ ರಚನೆ: ಇದು ಹೊನ್ನಾವರ ತಾಲೂಕು ಕರಾವಳಿಯಲ್ಲಿ ಅರಬ್ಬೀ ಸಮುದ್ರ ನಡುವೆ ವಿಜಯನಗರ ಅರಸರಿಂದ ನಿರ್ಮಿಸಲ್ಪಟ್ಟ ಬಸವರಾಜ ಕೋಟಿ ಕೋಟಿ 50ಮೀ ಎತ್ತರದ ೧೯ ಹೆಕ್ಟರ ಪ್ರದೇಶದಲ್ಲಿ ವಿಸ್ತರಿಸಿದೆ 8 ಪಾಳುಬಿದ್ದ ಆರೋಹಿತವಾದ ಬಂದೂಕುಗಳು, ಹಿಂದೂ ದೇವಾಲಯ ಹಾಗೂ ಭದ್ರಕೋಟೆಯನ್ನು ಹೊಂದಿದ್ದು ನೀವು ಇಲ್ಲಿ ಆನಂದವನ್ನು ಸಂಭ್ರಮಿಸಬಹುದು.
@ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ; ಭಕ್ತಿಯ ಪ್ರತೀಕ: ಇದು ಕೊಡಚಾದ್ರಿ ಪರ್ವತ ಶಿಖರದ ಕಣಿವೆಯಲ್ಲಿರುವ ಅಧ್ಯಾತ್ಮಿಕ ಪ್ರವಾಸಿ ಸ್ಥಳವಾಗಿದೆ. ಕೊಲ್ಲೂರು ಮೂಕಾಂಬಿಕೆ ದೇವಾಲಯವು ಪರಶುರಾಮನಿಂದ ರಚಿಸಲ್ಪಟ್ಟು 7 ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ.ದೇವಿಯು ಪಾರ್ವತಿಯ ಪ್ರತೀಕವಾಗಿ ರಾಕ್ಷಸನನ್ನು ಚಕ್ರದಿಂದ ಕೊಂದಳು ಎನ್ನುತ್ತಾರೆ. ಇಲ್ಲಿ ನೀವು ವರ್ಷಪೂರ್ತಿ ಯಾವಾಗಲಾದರೂ ಬರಬಹುದು, ನೀವು ದೇವಿಯ ದರ್ಶನವನ್ನು ಪಡೆಯಬಹುದು.
@ಇಡುಗುಂಜಿ ಗಣಪತಿಯ ದೇವಾಲಯ; ಭಕ್ತರ ಆಶ್ರಯ: ಇದು ಒಂದು ಭೇಟಿ ಮಾಡಲೇಬೇಕಾದ ಪ್ರಸಿದ್ಧ ಸ್ಥಳ ಇಲ್ಲಿ ಒಂದು ದಂತಕಥೆಯ ಪ್ರಕಾರ ಗಣಪತಿಯುಕುಂಜಾರಣ್ಯ ಎಂದು ಕರೆಯಲ್ಪಡುವ ಸ್ಥಳದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಮೊದಲು ಇಲ್ಲಿ ಋಷಿಗಳು ತಪಸ್ಸು ಮಾಡಲು ಬರುತ್ತಿದ್ದರು. ಗಣಪತಿಯು ನಿಮಗೆ ನಿಂತಿರುವ ವಿಗ್ರಹದಲ್ಲಿ ಕಾಣಿಸುತ್ತಾನೆ, ಇದು ಒಂದು ಅಪರೂಪದ ದೃಶ್ಯ.
@ಗೋಕರ್ಣ; ಬೀಚ್ ಗಳ ಭೂಮಿ: ಇಲ್ಲಿ ನಿಮಗೆ ಸಾಕಷ್ಟು ಬೀಚ್ ಗಳು ನೋಡಲು ಸಿಗುತ್ತವೆ.ಇಗಂತೂ ಇದನ್ನು ಗೋವಾಕ್ಕೆ ಹೋಲಿಸಿದ್ದಾರೆ. ಇಲ್ಲಿ ಯುವ ಪೀಳಿಗೆ ಹರಿದುಬರುತ್ತದೆ. ಗೋಕರ್ಣಕ್ಕೆ ನೀವು ಖಂಡಿತವಾಗಿ ಭೇಟಿ ನೀಡಬಹುದು.
@ಮರವಂತೆ ಬೀಚ್; ತನ್ನನೆಯ ಜಾಗ :ಇದು ಒಳ್ಳೆಯ ಸ್ಥಳವಾಗಿದೆ, ಕೊಡಚಾದ್ರಿ ಬೆಟ್ಟಗಳು, ಪ್ರಶಾಂತವಾದ ವಾತಾವರಣ, ಇರುಳಿನಲ್ಲಿ ಹೊಳೆಯುವ ನೀರು ತನ್ನನೆಯ ಅನುಭವವನ್ನು ಕೊಡುತ್ತದೆ. ಇಲ್ಲಿ ಬೋಟಿಂಗ್ ಸ್ಕೂಬಾ ಡೈವಿಂಗ್ ಮಾಡಬಹುದು ನೀರು ಬಹಳ ಶಾಂತತೆಯಿಂದ ಕೂಡಿರುತ್ತದೆ ನೀವು ಇಲ್ಲಿ ಭೇಟಿ ನೀಡಿ ಹೊಸ ಅನುಭವವನ್ನು ಪಡೆಯಬಹುದು.
@ಕುಡುಮರಿ ಶಕ್ತಿ ಜಲಪಾತ; ಮನಮೋಹಕ ಸ್ಥಳ: ಇದು ಚಕ್ತಿಕಲ್ ಗ್ರಾಮದ ಹಸಿರಿನಿಂದ ಕಾಡುಗಳಲ್ಲಿ ಸುಂದರ ಮೊಡಿ ಮಾಡುವ ಜಲಪಾತವಾಗಿದೆ. ಈ ಜಲಪಾತವು ಡೇರ್ ಡೆವಿಲ್ ಗಳಿಗೆ ತಮ್ಮ ಆಂತರಿಕ ಆತ್ಮವನ್ನು ತೃಪ್ತಿಪಡಿಸಲು ಮತ್ತು ಚಾಕ್ತಿಕಲ್ ನಿಂದ ದಟ್ಟವಾದ ಕಾಡಿನ ಮೂಲಕ ಚಾರಣ ಮಾಡಲು ಅವಕಾಶವನ್ನು ನೀಡುತ್ತದೆ. ಸಾಮಾನ್ಯ ನೋಡುಗರಿಗೆ ಸುರಕ್ಷಿತವಲ್ಲ ಎಂದು ಪರಿಗಣಿಸಲಾಗಿದೆ, 300 ಅಡಿ ಎತ್ತರದಿಂದ ಭೇಟಿ ನೀಡುವಾಗ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
@ಭಟ್ಕಳ; ಪ್ರಾಚೀನ ಬಂದರು ನಗರ: ಈ ನಗರವು ವಿಜಯನಗರ ಪ್ರಾಚೀನ ಕಾಲದ್ದಾಗಿದೆ ಇಲ್ಲಿ ದೇವಾಲಯಗಳು, ಮಹಡಿಗಳು, ಜನವಸತಿಗಳು ನೋಡಲು ಸಿಗುತ್ತವೆ. ಭಟ್ಕಳ ಅಸಂಖ್ಯಾತ ನೂರಾರು ಯುದ್ಧಗಳ ಗೆಲ್ಲುವಿಕೆ ಗೆ ಮತ್ತು ಸೋಲಿಗೆ ಕಾರಣವಾಗಿದೆ ಇದು ಶ್ರೀಮಂತರ ಪಟ್ಟಣವಾಗಿದೆ.ನೀವು ಶ್ರೀ ಚಿತ್ರಾಪುರ ಮಠ, ಲೈಟ್ ಹೌಸ್, ಭಟ್ಕಳ ಬೀಚಿಗೆ ಭೇಟಿನೀಡಬಹುದು.
@ಕೊಡಚಾದ್ರಿ ಬೆಟ್ಟ; ಭೂ ಸೌಂದರ್ಯವತಿ: ಇಲ್ಲಿ ಶಂಕರಾಚಾರ್ಯರು ಧ್ಯಾನ ಮಾಡಿದರು ಎಂದು ಹೇಳುತ್ತಾರೆ.ಚಾರಣ ನಾಗೋಡಿ ಗ್ರಾಮದಿಂದ ಪ್ರಾರಂಭವಾಗುತ್ತದೆ. ಹಚ್ಚಹಸಿರು ಭೂಮಿ ನೀವು ಇಲ್ಲಿ ಸಾಹಸ ಚಟುವಟಿಕೆಗಳನ್ನು ಮಾಡಬಹುದು. ಈ ಬೆಟ್ಟದ ನೈಸರ್ಗಿಕವಾದ ಸೌಂದರ್ಯ ಕಣ್ಣಿಗೆ ತಂಪೆನಿಸುತ್ತದೆ. ಬೆಟ್ಟದ ಹಲವಾರು ಕಥೆಗಳಿವೆ ನೀವು ಭೇಟಿ ನೀಡಿ ಮತ್ತು ನಿಮ್ಮ ಮನಸ್ಸನ್ನು ಪ್ರಕೃತಿಯಲ್ಲಿ ಲಿನಗೊಳಿಸಿ.
ನೀವು ಇಲ್ಲಿ ಆರಾಮಾಗಿ ಭೇಟಿ ನೀಡಬಹುದು;. ರಸ್ತೆಯ ಮಾರ್ಗವಾಗಿ:
ಬೆಂಗಳೂರಿನಿಂದ ಮುರುಡೇಶ್ವರದ ದೂರ - ೫೦೯ ಕಿಲೋಮೀಟರಗಳು.
ಮೈಸೂರಿನಿಂದ ಮುರುಡೇಶ್ವರದ ದೂರ - ೪೦೬ ಕಿಲೋಮೀಟರ.
ಶಿವಮೊಗ್ಗದಿಂದ ಮುರುಡೇಶ್ವರದ ದೂರ- ೧೮೭ ಕಿಲೋಮೀಟರಗಳು.
ಬೆಳಗಾವಿಯಿಂದ ಮುರುಡೇಶ್ವರ ದೂರ - ೨೬೬ ಕಿಲೋಮೀಟರಗಳು.
ಹುಬ್ಬಳ್ಳಿಯಿಂದ ಮುರುಡೇಶ್ವರ ದೂರ - ೨೦೪ ಕಿಲೋಮೀಟರಗಳು.
ಕೊಲ್ಲಾಪುರದಿಂದ ಮುರುಡೇಶ್ವರ ದೂರ - ೩೭೨ ಕಿಲೋಮೀಟರಗಳು.
ಪುಣೆಯಿಂದ ಮುರ್ಡೇಶ್ವರದ ದೂರ - ೬೦೦ ಕಿಲೋಮೀಟರಗಳು.
ಹೈದರಾಬಾದ್ ನಿಂದ ಮುರುಡೇಶ್ವರ ದೂರ - ೭೨೬ ಕಿಲೋಮೀಟರಗಳು.
ರೈಲು ಮಾರ್ಗವಾಗಿ:ಬೆಂಗಳೂರುನಿಂದ,ಹುಬ್ಬಳ್ಳಿಯಿಂದ ದೇಶದ ಯಾವಕಡೆಯಿಂದಾದರೂ ಬರಬಹುದು ಮುರ್ಡೇಶ್ವರ ರೈಲು ನಿಲ್ದಾಣವಿದೆ, ಇಲ್ಲಿಂದ ಕೇವಲ ೭. ಕಿಲೋಮೀಟರಗಳು ಮಾತ್ರ ದೂರದಲ್ಲಿದೆ.
ವಿಮಾನದ ಮಾರ್ಗವಾಗಿ:ವಿಮಾನದ ಮಾರ್ಗವಾಗಿಯೂ ಇಲ್ಲಿ ಬರಬಹುದು. ಸಮೀಪದಲ್ಲಿರುವ ವಿಮಾನನಿಲ್ದಾಣವು; ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ - ೧೫೪ ಕಿಲೋಮೀಟರಗಳು. ಹುಬ್ಬಳಿ ವಿಮಾನ ನಿಲ್ದಾಣದಿಂದ ೨೦೪ ಕಿಲೋಮೀಟರಗಳು. ಇಲ್ಲಿಂದ ನಿಮಗೆ ಬಸ್,ಕಾರ್, ರೈಲ್ವೆ ಸಿಗುತ್ತವೆ.
Post a Comment