ಈ ಬ್ಲಾಗ್ ಅನ್ನು ಹುಡುಕಿ

Adiyogi Shiva statue(Coimbatore)Isha foundat Yoga Center,time to visit,murti images

 ಆದಿಯೋಗಿ ಶಿವನ ಪ್ರತಿಮೆ :


ಆದಿಯೋಗಿ ಎಂದರೆ ಶಿವನು ಭೂಮಿಯ ಮೇಲಿನ ಮೊದಲ ಯೋಗ ಅಭ್ಯಾಸ ಮಾಡಿದವ ಅಥವಾ ಆದಿಯೋಗಿ ಅಂದರೆ "ಮೊದಲ ಯೋಗಿ" ಎಂದು ಕರೆಯುತ್ತಾರೆ, ಇದು ಯೋಗದ ಪ್ರತೀಕ ಅನ್ನುತ್ತಾರೆ . 

ಈ ಪ್ರತಿಮೆಯನ್ನು ಇಶಾ ಫೌಂಡೇಶನ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ.  ಇದನ್ನು ಜಗ್ಗಿ ವಾಸುದೇವರವರು ವಿನ್ಯಾಸಗೊಳಿಸಿದ್ದಾರೆ. ಮತ್ತು ಇದನ್ನು 24 ಫೆಬ್ರುವರಿ 2017 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವರಾತ್ರಿ ಯಂದು ಉದ್ಘಾಟನೆ ಮಾಡಿದರು. ಇದು 112 ಅಡಿ ಎತ್ತರ (34ಮೀ )ತಮಿಳುನಾಡಿನ ಕೊಯಮತ್ತೂರಿನಲ್ಲಿ ನೋಡಲು ಸಿಗುತ್ತದೆ.  112 ಎಂದರೆ, ಮೋಕ್ಷ ಪ್ರಾಪ್ತಿಗೆ 112 ಮಾರ್ಗಗಳು ಎಂದರ್ಥ. ಪಶ್ಚಿಮಘಟ್ಟಗಳ ಶ್ರೇಣಿಯ "ವೆಲ್ಲಿಯಂಗಿರಿ" ಪರ್ವತ ಗುಂಪಿನಲ್ಲಿ ಸುಂದರವಾಗಿ ಬೃಹತ್ ಮೂರ್ತಿ ನೋಡಲು ತುಂಬಾ ಆಕರ್ಷಕವಾಗಿದೆ.  ಇನ್ನು ಇದನ್ನು ನೋಡಲು ಯಾವ ಮಾರ್ಗವಾಗಿ ಹೋದರೆ ಒಳ್ಳೆಯದು, ತಂಗಲು ವಸತಿ ವ್ಯವಸ್ಥೆ ಹೇಗೆ, ಯಾವಾಗ ನೋಡಲು ಹೋದರೆ ಒಳ್ಳೆಯದು, ಪೂಜೆ,  ಆರತಿ,  ದರ್ಶನ ವೇಳೆಯ ವ್ಯವಸ್ಥೆ ಹೇಗೆ ಎಂಬುದು ನೋಡೋಣ.

MapLink:  https://www.google.com/search?gs_ssp=eJzj4tVP1zc0TKkoKs-qyDYyYLRSNagwTkq0MDNMSTMwMUhKSbU0tjKoMDNJTjZNMk4zNzMzN0w2sPTiS0zJrMxPz1QoLkksKU0FANuIFVI&q=adiyogi+statue&rlz=1C1CHBF_enIN1017IN1017&oq=&aqs=chrome.0.46i39i175i199i362j35i39i362l7.503020488j0j7&sourceid=chrome&ie=UTF-8# 

ಮೊದಲು ನೀವು ಬರಲು ಇಲ್ಲಿ ಮೂರು ತರಹದ ವ್ಯವಸ್ಥೆಯಿದೆ,

(೧) ಬೈ ರೋಡ್ :ಬಸ್/ ಕಾರ್ 

Coimbatore
ಗೆಳೆಯರೇ ನೀವು ನಿಮ್ಮ ಸ್ಥಳದಿಂದ ನೇರವಾಗಿ ಬರ ಬರಬಹುದು. ನಿಮ್ಮ ಪಟ್ಟಣಗಳಿಂದ ನೇರವಾಗಿ ಬಸ್ಸುಗಳು ಸಿಗಬಹುದು.  ಬೇಕಾದರೆ ಮಧುರೈಯಿಂದ, ಕೊಚ್ಚಿಯಿಂದ, ಚೆನ್ನೈ , ಬೆಂಗಳೂರಿಂದ ಸುಮಾರು ಎಲ್ಲಾ ಪಟ್ಟಣಗಳಿಂದ ಸಿಗಬಹುದು.  

(2) ಬೈ ಟ್ರೈನ್: 


                        ಸ್ನೇಹಿತರೆ ನೀವು ರೈಲ್ವೆ ಮಾರ್ಗವಾಗಿಯೂ ಕೊಯಂಬತ್ತೂರು ಜಂಕ್ಷನ್ ರೈಲ್ವೆ ಸ್ಟೇಷನ್ ಗೆ ಬರಬಹುದು. ಇದು ಆದಿಯೋಗಿ ಸ್ಟಾಚ್ಯು ಅತಿ ಸಮೀಪದ ರೈಲ್ವೆ ಸ್ಟೇಷನ್ ಆಗಿದೆ. 

 (೩) ಬೈ  ಏರ್:


                       ನೀವು ವಿಮಾನದ ಮಾರ್ಗವಾಗಿಯೂ ಬರಬಹುದು. ಇದು ನಗರದಿಂದ 18 ಕಿಲೋಮೀಟರ್ ದೂರದಲ್ಲಿ. ಕೊಯಂಬತ್ತೂರ ವಿಮಾನ ನಿಲ್ದಾಣದಿಂದ ಬರಬಹುದು.  

ಗೆಳೆಯರೇ ಈ ವ್ಯವಸ್ಥೆಯಿಂದ ನೀವು ಮೊದಲು ಕೊಯಂಬತ್ತೂರಗೆ  ಬರಬೇಕು.  ಇಲ್ಲಿಂದ ನಿಮಗೆ ಆದಿಯೋಗಿ ಸ್ಟಾಚ್ಯು ಗೆ ಹೋಗಲು ಲೋಕಲ್ ಬಸ್, ಆಟೋ ವ್ಯವಸ್ಥೆಯಯೂ ಇದೆ.  ನಿಮಗೆ ಕೊಯಂಬತ್ತೂರಿನಲ್ಲಿ 14D ಎಂಬ ಬಸ್ಸು ಕೇವಲ ಅಂದರೆ ಕೇವಲ ಆದಿಯೋಗಿಗೆ ಅಥವಾ ಇಶಾ ಫೌಂಡೇಶನ್ ಗೆ ಹೋಗಲು ಮಾತ್ರವಿದೆ. ಇಲ್ಲ ಎರಡನೇ ಆಪ್ಷನ್ ನಿಮಗೆ ಆಟೋರಿಕ್ಷಾ ಇದೆ ಎಲ್ಲ ಸ್ಥಳೀಯರು tuk tuk ಎಂದು ಕರೆಯುತ್ತಾರೆ.  ಬಾಡಿಗೆ ಸುಮಾರು ೧೦೦೦ ರಿಂದ ೧೨೦೦ ತಗೊಳ್ಳುತ್ತಾರೆ.   

                        ಗೆಳೆಯರೇ ನೀವು ಈಶ ಫೌಂಡೇಶನ್ ತಲುಪಿದ ಮೇಲೆ ನಿಮಗೆ ಮಾರ್ಗದಲ್ಲಿ ಒಂದು ಪೋಸ್ಟರ್ ಸಿಗುತ್ತದೆ. ಬಲಕ್ಕೆ ಹೋದರೆ ಆದಿಯೋಗಿ ಇಲ್ಲಿ ಕ್ಯಾಮೆರಾ ಮತ್ತು ಎಲೆಕ್ಟ್ರಿಕಲ್ ಗೆಜೆಟ್ ಗಳ ಅನುಮತಿ ಇದೆ.ಮತ್ತೊಂದು ಕಡೆ ಅಂದರೆ ಎಡಕ್ಕೆ ಹೋದರೆ ಧ್ಯಾನಲಿಂಗ ಇದೆ.  ಹೋಗುವ ಮುಂಚೆ ನಿಮ್ಮ ಪರ್ಸ್, ಮೊಬೈಲ್, ಕ್ಯಾಮೆರಾ ಇನ್ನೂ ಮುಂತಾದವುಗಳು ಲೋಕರ್ ನಲ್ಲಿ ಇಟ್ಟು ಟೋಕನ್ ಪಡೆದುಕೊಂಡು ಹೋಗಬೇಕು.  ದರ್ಶನ ಪಡೆದು ಬಂದ  ನಂತರ ಸಿಗುತ್ತವೆ.  

                        ಇನ್ನು ಗೆಳೆಯರೇ ಆದಿಯೋಗಿಗೆ ಹೋಗುವುದು ಅಲ್ಲಿಂದ ಬಲಕ್ಕೆ ಸುಮಾರು 500 ಮೀಟರ್ ದೂರ, ನಡೆದುಕೊಂಡು ಅಥವಾ ಎತ್ತಿನ ಟಾಂಗಾದಲ್ಲಿ ಹೋಗಬಹುದು.      

                        ನೀವು ಮುಂದೆ ನೋಡುವುದೇ ಸುಂದರ ಒಳ್ಳೆಯ ಆಕೃತಿ, ಅದರ ಮುಂದೆ ಕಾಣುವುದು ಮಂಟಪ. ಅದರಲ್ಲಿ ಅಭಿಷೇಕ, ಪೂಜಾ, ಅರ್ಚನೆ ಮಾಡಬಹುದು ವಿಥ್ ಫಿಸ್ ವಿಥೌಟ್ ಫಿಸ್. ಸ್ನೇಹಿತರೇ ಇನ್ನೂ ನೀವು ವರ್ಷದ ಎಲ್ಲಾ ಸಮಯದಲ್ಲೂ ಬಂದರು ಒಳ್ಳೆಯದು, ಅದರಲ್ಲೂ ಚಳಿಗಾಲದಲ್ಲಿ ಬಂದರೆ ನಿಮಗೆ ಹೊಗೆಮಂಜು ನೋಡಲು ಅತಿಸುಂದರ ಮನೋಲ್ಲಾಸವಾಗುತ್ತದೆ. ಮತ್ತು ಇದರ ಜೊತೆ ನೀವು ಊಟಿ ಹಾಗೂ ಕಣ್ಣೂರನ್ನು ನಿಮ್ಮ ಪ್ರವಾಸದಲ್ಲಿ ಅಳವಡಿಸಿಕೊಳ್ಳಬಹುದು. 

ನೀವು  ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 8ರ ತನಕ ಇಲ್ಲಾಂದ್ರೆ ರಾತ್ರಿ ಸುಂದರ ದೃಶ್ಯವನ್ನು ನೋಡಿಕೊಂಡು ಬರಬಹುದು. 

                       ಸ್ನೇಹಿತರೆ ಒಮ್ಮೆಯಾದರೂ ಹೋಗಿ ಬನ್ನಿ ಆದಿಯೋಗಿ ಸ್ಟ್ಯಾಚು ನೋಡಲು ಜಾಸ್ತಿ ಖರ್ಚೆನೂ ಬರುವುದಿಲ್ಲ, ಹೊಟ್ಟೆಲ ಸ್ಥಳೀಯ ಕೊಯಂಬತ್ತೂರಿನಲ್ಲಿ ನಿಮಗೆ ಹಾಲ್ಟ್  ಮಾಡಲು ಸಿಗುತ್ತದೆ. ಊಟ-ವಸತಿ ಎಲ್ಲವೂ ಸೂಪರ್ ಫ್ಯಾಮಿಲಿ ಜೊತೆ ಹೋಗುವುದು ಅತಿ ಉತ್ತಮ. 

Thank You......

Can we visit Adiyogi statue?




ಕಾಮೆಂಟ್‌ಗಳಿಲ್ಲ

Top 5 Places to Visit Weather Temperature in Ooty Tamil Nadu

Top 5 Places to Visit Weather Temperature in Ooty Tamil Nadu  ಪ್ರಕೃತಿಯ ಸುಂದರ ನೀಲಗಿರಿ ಪರ್ವತ ಶ್ರೇಣಿಯ ಉಪಸ್ಥಿತಿಯ  ಮನಮೋಹಕ  ಪರಿಸರದ ಪ್ರಮುಖ ವೀಕ್ಷಣೆಯ...

Blogger ನಿಂದ ಸಾಮರ್ಥ್ಯಹೊಂದಿದೆ.